ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 31–3–1970

Last Updated 30 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಕಾವೇರಿ ಜಲ ವಿವಾದ ರಾಜ್ಯದ ವಾದ ಸಿದ್ಧ
ಬೆಂಗಳೂರು, ಮಾರ್ಚ್‌ 30–
ಕಾವೇರಿ ನದಿ ನೀರಿನ ವಿವಾದದ ಸಂಬಂಧದಲ್ಲಿ ರಾಜ್ಯದ ವಾದವನ್ನು ಮಂಡಿಸುವ ಬಗ್ಗೆ ಈಗಾಗಲೇ ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಹೇಮಾವತಿ ಯೋಜನೆಯ ಮತ್ತು ಕಬಿನಿ ಯೋಜನೆಯ ಕೆಲಸವನ್ನು ನಿಲ್ಲಿಸಿಲ್ಲ, ನಿಲ್ಲಿಸುವ ಅವಶ್ಯಕತೆಯೂ ಇಲ್ಲ ಎಂದು ಅವರು ಎಂ.ವಿ. ವೆಂಕಟಪ್ಪ ಅವರ ಪ್ರಶ್ನೆಗೆ ಉತ್ತರಿಸಿದರು.

ಕಾನೂನು ಭಂಗ ಚಳವಳಿ ಸಂಭವ
ಬೆಂಗಳೂರು, ಮಾರ್ಚ್‌ 30–
ಮಹಾಜನ್‌ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಕೇಂದ್ರವನ್ನು ಒತ್ತಾಯ ಮಾಡಲು ಸರ್ವಪಕ್ಷಗಳಿಂದ ಕಾಯ್ದೆ ಭಂಗ ಚಳವಳಿ ಹಾಗೂ ಜನತಾ ಚಳವಳಿ ಜರುಗುವ ಸಂಭವವಿದೆ.

‘ಶಾಂತಿಯುತವಾಗಿ ಹಾಗೂ ಪರಿಣಾಮಕಾರಿಯಾದ’ ರೀತಿಯಲ್ಲಿ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಲು ಏಪ್ರಿಲ್‌ 3ನೇ ವಾರದಲ್ಲಿ ಬೆಳಗಾವಿಯಲ್ಲಿ ಸರ್ವಪಕ್ಷಗಳ ಸಭೆಯೊಂದು ನಡೆಯಲಿದೆ.

ಉಕ್ಕು ಕಾರ್ಖಾನೆ: ವಿದೇಶಿಯರ ಸಲಹೆ ಇನ್ನು ಮುಂದೆ ಇಲ್ಲ
ನವದೆಹಲಿ, ಮಾರ್ಚ್‌ 30–
ರಾಷ್ಟ್ರದಲ್ಲಿ ನಿರ್ಮಿಸುವ ಉಕ್ಕು ಕಾರ್ಖಾನೆಗಳ ವಿನ್ಯಾಸ ಮತ್ತು ಎಂಜಿನಿಯರಿಂಗ್‌ ವಿಷಯಗಳಿಗೆ ಪ್ರಧಾನ ಸಲಹೆಗಾರರಾಗಿ ವಿದೇಶಿಯರನ್ನು ಇನ್ನು ಮುಂದೆ ನೇಮಿಸುವುದಿಲ್ಲ ಎಂದು ಉಕ್ಕು ಸ್ಟೇಟ್‌ ಸಚಿವ ಕೆ.ಸಿ. ಪಂತ್‌ ಇಂದು ರಾಜ್ಯಸಭೆಗೆ ತಿಳಿಸಿದರು.

ರಾಷ್ಟ್ರವು ಈ ವಿಷಯದಲ್ಲಿ ಸ್ವಾವಲಂಬಿಯಾಗಲು ಹಿಂದೂಸ್ತಾನ್‌ ಉಕ್ಕು ಸಂಸ್ಥೆಗೆ ಸೇರಿದ ಕೇಂದ್ರ ಎಂಜಿನಿಯರಿಂಗ್‌ ಮತ್ತು ಡಿಸೈನ್‌ ಬ್ಯೂರೊವನ್ನು ಬಲಗೊಳಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT