ಮೈಸೂರು ವಿಶ್ವವಿದ್ಯಾನಿಲಯ ಪಿ.ಯು.ಸಿ., ಮೊದಲ ಬಿ.ಎ. ಅಂಚೆ ಶಿಕ್ಷಣ ಆರಂಭ

ಮೈಸೂರು, ಮೇ 5– ಕೆಲವು ವರ್ಷಗಳ ಹಿಂದೆ ಸಂಜೆ ಕಾಲೇಜ್ ಪ್ರಾರಂಭಿಸಿ ದಕ್ಷಿಣ ಭಾರತದ ಇತರ ವಿಶ್ವವಿದ್ಯಾನಿಲಯಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟ ಮೈಸೂರು ವಿಶ್ವವಿದ್ಯಾನಿಲಯ ಈಗ ಅಂಚೆ ಮೂಲಕ ಶಿಕ್ಷಣ ಪ್ರಾರಂಭಿಸಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.

ಪಿ.ಯು.ಸಿ. ಮತ್ತು ಆರ್ಟ್ಸ್ ವಿಷಯಗಳಲ್ಲಿ ಮೊದಲ ವರ್ಷದ ಪದವಿ ಪರೀಕ್ಷೆಗೆ ಅಂಚೆ ಮೂಲಕ ಶಿಕ್ಷಣ ಸಾಧ್ಯವಾದುದಕ್ಕೆ ಉಪಕುಲಪತಿ ದೇ. ಜವರೇಗೌಡರು ಹರ್ಷ ವ್ಯಕ್ತಪಡಿಸಿದರು.

ಇಂದು ಇಲ್ಲಿ ಅಂಚೆ ಶಿಕ್ಷಣ ಉದ್ಘಾಟಿಸಿ ಪ್ರಥಮ ಪಾಠಗಳನ್ನು ಬಿಡುಗಡೆ ಮಾಡಿದ ಜವರೇಗೌಡರು, 1971– 72ರ ಶಿಕ್ಷಣ ವರ್ಷದಿಂದ ಅಂಚೆ ಮೂಲಕ ಮಾನವೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಶಿಕ್ಷಣ ಪ್ರಾರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಅತ್ಯಾನಂದ

ನವದೆಹಲಿ, ಮೇ 5– ಮೈಸೂರು ರಾಜ್ಯದಲ್ಲಿ ವಿಧಾನಸಭೆಗೆ ನಡೆದ ಮೂರು ಉಪಚುನಾವಣೆಗಳ ಜಯಭೇರಿಯಿಂದ ಆಡಳಿತ ಕಾಂಗ್ರೆಸ್ಸಿಗೆ ಮೇರೆ ಮೀರಿದ ಸಂತೋಷ.

ಇಂದು ರಾತ್ರಿ ಹುನಗುಂದ ಕ್ಷೇತ್ರದ ಫಲಿತಾಂಶ ಬಂದಾಗ ಆಡಳಿತ ಕಾಂಗ್ರೆಸ್ಸಿನ ಸಂಸತ್ ಮಂಡಳಿ ಸಭೆ ನಡೆಯುತ್ತಿತ್ತು. ತಮ್ಮ ಅಭ್ಯರ್ಥಿಯ ವಿಜಯದ ಸುದ್ದಿ ಕೇಳಿ ಆಡಳಿತ ಕಾಂಗ್ರೆಸ್ ನಾಯಕರುಗಳು ಹರ್ಷದಿಂದ ಕುಣಿದಾಡಿದರು. ಸಿಹಿ ಹಂಚಿದರು. ಸಭೆಯ ಕಾರ್ಯಕಲಾಪದ ವರದಿ ಮಾಡಲು ಬಂದಿದ್ದ ಪತ್ರಿಕಾ ವರದಿಗಾರರಿಗೂ ಸಂಭ್ರಮದಿಂದ ಸಿಹಿ ಹಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.