ಗುರುವಾರ , ಜುಲೈ 29, 2021
23 °C
ಸೋಮವಾರ, 13–7–1970

50 ವರ್ಷಗಳ ಹಿಂದೆ | ಪೋರ್ಟರಿಕಾ ತರುಣಿ ವಿಶ್ವಸುಂದರಿಯಾಗಿದ್ದು ಇದೇ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಫಿ ಬೀಜದ ಬೆಲೆ ಹತೋಟಿಯಲ್ಲಿ ಇಡಲು ಬೋರ್ಡಿನ ಹೊಸ ಯೋಜನೆ
ಮದ್ರಾಸ್‌, ಜುಲೈ 12–
ಆಂತರಿಕ ಮಾರುಕಟ್ಟೆಯಲ್ಲಿ ಕಾಫಿ ಬೀಜದ ಬೆಲೆ ಕ್ರಮವಾಗಿ ಏರುತ್ತಿರುವಕಾರಣ, ಕಾಫಿ ಬೀಜದ ಬೆಲೆಯನ್ನು ಹತೋಟಿಯಲ್ಲಿಡಲು ಕಾಫಿ ಬೋರ್ಡ್‌ ಹೊಸ ಯೋಜನೆಯೊಂದನ್ನು ಪ್ರಾರಂಭಿಸಿದೆ ಎಂದು ಬೋರ್ಡಿನ ಅಧ್ಯಕ್ಷ ಶ್ರೀ ಎಚ್‌.ಜಿ.ವಿ. ರೆಡ್ಡಿ ಇಂದು ಇಲ್ಲಿ ತಿಳಿಸಿದರು.

ಈ ಯೋಜನೆ ಪ್ರಕಾರ, ಬೋರ್ಡ್‌ ನಡೆಸುವ ಇಂಡಿಯಾ ಕಾಫಿ ಡಿಪೋಗಳು ಮುಂದಿನ ಆರು ತಿಂಗಳ ಕಾಲ ಕಾಫಿ ಬೀಜದ ಮಾರಾಟವನ್ನು ನಿಲ್ಲಿಸುವುವು ಮತ್ತು ಕಾಫಿ ಬೀಜದ ಬದಲು ಬ್ಲೆಂಡ್‌ ಮಾಡಿದ ಕಾಫಿ ಪುಡಿಯನ್ನು ಮಾರುವುವು. ಕಾಫಿ ಬೀಜದ ಬೆಲೆ ಏರಿದರೂ 6 ತಿಂಗಳುಗಳ ಕಾಲ ಕಾಫಿ ಪುಡಿಯ ಬೆಲೆ ಒಂದೇ ಸಮನೆ ಇರುತ್ತದೆ.

ಪೋರ್ಟರಿಕಾ ತರುಣಿ ವಿಶ್ವಸುಂದರಿ
ಮಿಯಾಮಿ ಬೀಚ್‌, ಫ್ಲಾರಿಡಾ, ಜುಲೈ 12–
ಪೋರ್ಟರಿಕಾದ 20ರ ತರುಣಿ ಮಾರಿಸೋಲ್‌ ಮಾಲಾರೆಟ್‌ ಕಾಂಟ್ರಿರಾಸ್‌ ವಿಶ್ವಸುಂದರಿಯಾಗಿ (35– 23– 35) ನಿನ್ನೆ ರಾತ್ರಿ ಇಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಆಯ್ಕೆಯಾದಳು.

ವಿಶ್ವಸುಂದರಿಯಾಗಿ ಆಯ್ಕೆಯಾದ ಸಂಭ್ರಮದಲ್ಲಿ ಆನಂದಬಾಷ್ಪ ಸುರಿಸುತ್ತಿದ್ದ ಕಾಂಟ್ರಿರಾಸ್‌ಗೆ ಕಳೆದ ವರ್ಷದ ಸುಂದರಿ ಗ್ಲೋರಿಯಾ ದಯಾಜ್‌ ಕಿರೀಟಧಾರಣೆ ಮಾಡಿದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು