ಬುಧವಾರ, 2–7–1969

ಗುರುವಾರ , ಜೂಲೈ 18, 2019
23 °C
1969

ಬುಧವಾರ, 2–7–1969

Published:
Updated:

2 ವಿಮಾನಾಪಘಾತ: 26 ಮಂದಿಯ ಸಾವು

ನವದೆಹಲಿ, ಜುಲೈ 1– ಆಗ್ರಾ ಮತ್ತು ಜೋಧಪುರದ ಬಳಿ ನಿನ್ನೆ ಸಂಭವಿಸಿದ ಎರಡು ವಿಮಾನ ಅಪಘಾತಗಳಲ್ಲಿ 18 ಮಂದಿ ಸೈನ್ಯಾಧಿಕಾರಿಗಳು ಮತ್ತು 8 ಮಂದಿ ಸಿವಿಲಿಯನ್ನರು ಸಾವಿಗೀಡಾದರೆಂದು ರಕ್ಷಣಾ ಖಾತೆ ಇಂದು ಪ್ರಕಟಿಸಿದೆ.

‘ಪ್ರಿನ್ಸ್ ಆಫ್‌ ವೇಲ್ಸ್’ ಚಾರ್ಲ್ಸ್‌ಗೆ ಕಿರೀಟ ಕರ್ನರ್‌ವಾನ್,  (ವೇಲ್ಸ್) ಜುಲೈ 1– ಎಲಿಜಬತ್ ರಾಣಿ ತನ್ನ ಹಿರಿಯ ಪುತ್ರ ಚಾರ್ಲ್ಸ್ ರಾಜಕುಮಾರನ ನೆತ್ತಿಯ ಮೇಲೆ ಬಂಗಾರದ ತಲೆಯುಡುಗೆಯನ್ನಿಟ್ಟು ವೇಲ್ಸಿನ ರಾಜಕುಮಾರನನ್ನಾಗಿ ಹಾಗೂ ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ವಿಧ್ಯುಕ್ತವಾಗಿ ನೇಮಕ ಮಾಡಿದರು.

ಪಸ್ವಾನ್ ಸರ್ಕಾರದ ಪತನ: ಸಂಪುಟದ ರಾಜೀನಾಮೆ

ಪಟ್ಣ, ಜುಲೈ 1– ಬಿಹಾರದ ಮುಖ್ಯಮಂತ್ರಿ ಭೋಲಾ ಪಸ್ವಾನ್ ಶಾಸ್ತ್ರಿ ಅವರು ತಮ್ಮ ಹಾಗೂ ತಮ್ಮ ಸಂಪುಟದ ಸಹೋದ್ಯೋಗಿಗಳ ರಾಜೀನಾಮೆಯನ್ನು ರಾಜ್ಯಪಾಲ ನಿತ್ಯಾನಂದ ಕನುಂಗೋ ಅವರಿಗೆ ಇಂದು ಸಲ್ಲಿಸಿದರು. ಜನಸಂಘ ಬೆಂಬಲ ಹಿಂತೆಗೆದುಕೊಂಡಿ ದ್ದರಿಂದ ತಮ್ಮ ಸರ್ಕಾರ ಬಹುಮತ ಕಳೆದು ಕೊಂಡಿತು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !