ಭಾನುವಾರ, ಅಕ್ಟೋಬರ್ 25, 2020
27 °C

ಪ್ರಜಾವಾಣಿ 50 ವರ್ಷಗಳ ಹಿಂದೆ | ಸೋಮವಾರ, 21–9–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಟುಂಬಕ್ಕೆ 25 ಎಕರೆಗಿಂತ ಹೆಚ್ಚು ನೀರಾವರಿ ಭೂಮಿ ಬೇಡ: ಕೇಂದ್ರದ ಸಲಹೆ
ನವದೆಹಲಿ, ಸೆ. 20–
ಒಂದು ಕುಟುಂಬ ಹದಿನೈದರಿಂದ ಇಪ್ಪತ್ತೈದು ಎಕರೆಗಿಂತ ಹೆಚ್ಚು ನೀರಾವರಿ ಜಮೀನು ಹೊಂದಿರಬಾರದೆಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಿದೆ.

ಭೂಮಿತಿ ಕುರಿತು ರಾಜ್ಯ ಸರ್ಕಾರಗಳಿಗೆ ನೀಡಿರುವ ಸಲಹೆಯಲ್ಲಿ ಮೇಲಿನಂತೆ ಸೂಚಿಸಿರುವ ಕೇಂದ್ರ ಸರ್ಕಾರ, ಇತರ ಜಮೀನಿನ ಮಿತಿ 30ರಿಂದ 50 ಎಕರೆಗಿಂತ ಹೆಚ್ಚಿರಬಾರದೆಂದು ತಿಳಿಸಿದೆ.

**
ಚಂದ್ರನ ಮೇಲೆ ರಷ್ಯಾದ ಮಾನವರಹಿತ ಲೂನಾ
ಮಾಸ್ಕೊ, ಸೆ. 20–
ರಷ್ಯಾದ ಮಾನವರಹಿತ ಬಾಹ್ಯಾಕಾಶ ನೌಕೆ ಲೂನಾ– 16  ಚಂದ್ರನ ಫಲಶಕ್ತಿ ಸಾಗರದ ಶುಷ್ಕ ಮೇಲ್ಮೈ ಮೇಲೆ ಇಂದು ಮೆತ್ತಗೆ ಇಳಿಯಿತೆಂದು ರಷ್ಯಾದ ವಾರ್ತಾ ಸಂಸ್ಥೆ ತಾಸ್‌ ಪ್ರಕಟಿಸಿದೆ.

ಚಂದ್ರನ ಮೇಲೆ ಮೆಲ್ಲನೆ ಇಳಿದ ರಷ್ಯಾದ ಅನ್ವೇಷಕ ನೌಕೆಗಳಲ್ಲಿ ಇದು ಮೂರನೆಯದು. ಆದರೆ, ಇದು ಬಾಹ್ಯಾಕಾಶ ವಿಜ್ಞಾನಿಗಳು ಇದುವರೆಗೆ ತುಲನಾತ್ಮಕವಾಗಿ ಅನ್ವೇಷಿಸದ ಪ್ರದೇಶದಲ್ಲಿ ಇಳಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು