ಸೋಮವಾರ, 22–7–1968

7

ಸೋಮವಾರ, 22–7–1968

Published:
Updated:
ಮಲೇಸಿಯಾದ ಪ್ರಧಾನಿ ಟುಂಕು ಅಬ್ದುಲ್‌ ರಹಮಾನ್‌ ಮತ್ತು ಪ್ರಧಾನಿ ಇಂದಿರಾಗಾಂಧಿ ಅವರು ಕಾರಿನಲ್ಲಿ ಶನಿವಾರ ಪಾಲಂ ವಿಮಾನ ನಿಲ್ದಾಣದಿಂದ ಬರುತ್ತಿರುವುದು

ಭಾರತಕ್ಕೆ ಮಿಲಿಟರಿ ಸಮಸ್ಯೆಯಲ್ಲ ಎಂದು ಇಂದಿರಾ

ನವದೆಹಲಿ, ಜು. 21– ಪಾಕಿಸ್ತಾನಕ್ಕೆ ರಷ್ಯದ ಶಸ್ತ್ರಾಸ್ತ್ರ ಭಾರತಕ್ಕೆ ಸಮಸ್ಯೆಯನ್ನುಂಟುಮಾಡದು ಎಂದು ಕಾಂಗ್ರೆಸ್‌ ಪಾರ್ಲಿಮೆಂಟರಿ ಪಕ್ಷಕ್ಕೆ ಪ್ರಧಾನಿ ಇಂದಿರಾಗಾಂಧಿ ಇಂದು ಭರವಸೆಯಿತ್ತರು. ‘ಮಿಲಿಟರಿ ದೃಷ್ಟಿಯಿಂದ ಭಾರತವು ಬಲಯುತವಾಗಿದೆ. ತನ್ನ ರಕ್ಷಣಾ ಸಾಮರ್ಥ್ಯವನ್ನು ಒಟ್ಟುಗೂಡಿಸಲು ಉತ್ತಮ ಸ್ಥಿತಿಯಲ್ಲಿದೆ’ ಎಂದು ಅವರು ಕಾಂಗ್ರೆಸ್‌ ಪಾರ್ಲಿಮೆಂಟರಿ ಪಕ್ಷದ ಸಭೆಯಲ್ಲಿ ಹೇಳಿದರು.

ನಾಥ್‌ಪೈ ನಿರ್ಣಯ ಅನಪೇಕ್ಷಣೀಯ

ನವದೆಹಲಿ, ಜು. 21– ವಿವಿಧ ವಿರೋಧಪಕ್ಷಗಳ ನಾಯಕರು ಒಟ್ಟಾಗಿ ತಮಗೆ ಬರೆದಿದ್ದ ಪತ್ರದ ಬಗೆಗೆ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ  ಅವರು ಸಂಸತ್‌ ಸದಸ್ಯ ಶ್ರೀ ನಾಥ್‌ಪೈ ಅವರನ್ನು ಇಂದು ಆಹ್ವಾನಿಸಿ ಮಾತುಕತೆ ನಡೆಸಿದರು.

ರಾಷ್ಟ್ರದ ವಿವಿಧ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಪಾಕಿಸ್ತಾನಕ್ಕೆ ಸೋವಿಯತ್‌ ಶಸ್ತ್ರಾಸ್ತ್ರ ಸರಬರಾಜು ಬಗ್ಗೆ ವಿರೋಧಪಕ್ಷಗಳು ಶಿಫಾರಸು ಮಾಡಿರುವ ನಿರ್ಣಯವನ್ನು ಪರಿಶೀಲಿಸಿ ಅದು ಸಮಯೋಚಿತವಲ್ಲವೆಂಬ ತೀರ್ಮಾನಕ್ಕೆ ಬಂದಿರುವುದಾಗಿ ಪ್ರಧಾನಿ ತಿಳಿಸಿದರು.

ಪಾಟೀಲ್‌, ಜತ್ತಿ ನಡುವೆ ಮಾತುಕತೆ ಮಾಸಾಂತ್ಯದಲ್ಲಿ ಸಂಭವ

ಬೆಂಗಳೂರು, ಜು. 21– ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಮತ್ತು ಮಾಜಿ ಸಚಿವ ಶ್ರೀ ಬಿ.ಡಿ. ಜತ್ತಿ ಅವರ ನಡುವೆ ನಡೆಯುತ್ತದೆಂದು ನಿರೀಕ್ಷಿಸಲಾಗಿದ್ದ ಎರಡನೆ ಸುತ್ತಿನ ಮಾತುಕತೆ ನಡೆಯಲಿಲ್ಲ. ಹಣಕಾಸು ಆಯೋಗದೊಡನೆ ಚರ್ಚಿಸಲು ಶ್ರೀ ಪಾಟೀಲ ದೆಹಲಿ ಪ್ರಯಾಣವೇ ಇದಕ್ಕೆ ಕಾರಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !