ಶುಕ್ರವಾರ, ಏಪ್ರಿಲ್ 10, 2020
19 °C

ಬುಧವಾರ, 1–10–1969

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಾವಹಾರಿಕ ನಿರ್ಧಾರಕ್ಕೆ ಬ್ಯಾಂಕುಗಳ ಪಾಲಕರಿಗೆ ಸ್ವಾತಂತ್ರ್ಯ: ಇಂದಿರಾ

ನವದೆಹಲಿ, ಸೆ. 30– ಪೂರ್ಣ ದಕ್ಷತೆಯಿಂದ ಕಾರ್ಯನಿರ್ವಹಿಸಲು ಹಾಗೂ ವ್ಯಾವಹಾರಿಕ ತೀರ್ಮಾನಗಳನ್ನು ಕೈಗೊಳ್ಳಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ.

ರಾಜಕೀಯ ಕಾರಣಗಳಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಭರವಸೆ ನೀಡುವುದರಲ್ಲಿ ತಾವು ಹಿಂಜರಿಯುವುದಿಲ್ಲವೆಂದು ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ನುಡಿದರು.

ನೆಲಸಮ ಯಂತ್ರಗಳ ಆಮದು ನಿಷೇಧಕ್ಕೆ ಬಿ.ಇ.ಎಂ.ಎಲ್. ಸಲಹೆ

ಬೆಂಗಳೂರು, ಸೆ. 30– ನೆಲಸಮ ಯಂತ್ರ ಮಾಡುವಂತಹ ಎಲ್ಲ ಪ್ರಮಾಣದ ಯಂತ್ರಗಳನ್ನೂ ತಯಾರಿಸುವ (ಬುಲ್‌ಡೋಜರ್‌ಗಳು) ಶಕ್ತಿ ಇಂದು ಭಾರತ್ ಅರ್ತ್ ಮೂವರ್ಸ್ ಸಂಸ್ಥೆಗೆ ಬಂದಿರುವುದರಿಂದ ಈ ಯಂತ್ರಗಳ ಆಮದನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಭಾರತ್ ಅರ್ತ್ ಮೂವರ್ಸ್ ಸಂಸ್ಥೆ ಆಡಳಿತ ಮಂಡಲಿಯ ಅಧ್ಯಕ್ಷ ಮೇ.ಜ. ಹರ್ಕಿರಾತ್ ಸಿಂಗ್‌ರವರು ಇಂದು ಇಲ್ಲಿ ತಿಳಿಸಿದರು.

ಇಂದಿಗೂ ಶಿಕ್ಷಣದಲ್ಲಿ ಹೆಣ್ಣೇ ಹಿಂದು

ನವದೆಹಲಿ, ಸೆ. 30– ಶಿಕ್ಷಣ ಪಡೆಯುವುದರಲ್ಲಿ ಇಂದಿಗೂ ಹೆಣ್ಣು ಮಕ್ಕಳು ಗಂಡು ಹುಡುಗರಿಗಿಂತ ಬಹಳ ಹಿಂದುಳಿದಿದ್ದಾರೆ.

ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳುವವರ ಪೈಕಿ ಗಂಡು ಹುಡುಗರ ಸಂಖ್ಯೆ 100 ಇದ್ದರೆ ಹೆಣ್ಣುಮಕ್ಕಳ ಸಂಖ್ಯೆ ಕೇವಲ 14.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು