ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 20–8–1969

Last Updated 19 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಷೋಕಾಸ್ ನೋಟಿಸ್ ವಾಪಸಾತಿ ಇಲ್ಲ: ಎಸ್ಸೆನ್

ನವದೆಹಲಿ, ಆ. 19– ರಾಷ್ಟ್ರಪತಿ ಚುನಾವಣೆ ಸಂಬಂಧದಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿದುದಕ್ಕಾಗಿ ವಿವರಣೆ ಕೇಳಿ ಪ್ರಧಾನಿ ಇಂದಿರಾ ಗಾಂಧಿ ಮತ್ತಿತರ ಕೆಲವು ಪ್ರದೇಶ ಕಾಂಗ್ರೆಸ್ ನಾಯಕರು ಮತ್ತು ಕೇಂದ್ರ ಸಚಿವರಿಗೆ ನೀಡಿದ್ದ ‘ಷೋಕಾಸ್ ನೋಟಿಸ್‌’ಗಳನ್ನು ವಾಪಸು ಪಡೆಯಲು ಕಾಂಗ್ರೆಸ್ ಅಧ್ಯಕ್ಷರು ನಿರಾಕರಿಸಿದ್ದಾರೆ.

ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಮತ್ತಿತರರಿಗೆ ವಿವರಣೆ ಕೇಳಿ ಬರೆದಿರುವ ಪತ್ರವನ್ನು ವಾಪಸ್ ಪಡೆಯುವಂತೆ ಸಿ. ಸುಬ್ರಹ್ಮಣ್ಯಂ ಮತ್ತು ಜಿ.ಎಲ್. ನಂದಾರವರು ಬರೆದ ಪತ್ರಕ್ಕೆ ಇಂದು ನಿಜಲಿಂಗಪ್ಪನವರು ಪತ್ರಕರ್ತರೊಡನೆ ಮಾತನಾಡುತ್ತಾ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

‘ವೈಯಕ್ತಿಕವಾಗಿ ಹೇಳುವುದಾದರೆ ಕ್ಷಮಿಸಲು ಮತ್ತು ಆದದ್ದನ್ನು ಮರೆಯಲು ನಾನು ಸಿದ್ಧ. ಆದರೆ ನನ್ನ ಸಂಸ್ಥೆಯನ್ನೇ ಜಗ್ಗಿಸಿದರೆ ಅದಕ್ಕೆ ನಾನು ಸಿದ್ಧನಿಲ್ಲ’ ಎಂದು ಅವರು ಹೇಳಿದರು.

ಕಾಂಗ್ರೆಸ್ ಇಬ್ಭಾಗ ಖಚಿತ

ನವದೆಹಲಿ, ಆ. 19– ರಾಷ್ಟ್ರಪತಿ ಚುನಾವಣೆಯ ಮತಗಳ ಎಣಿಕೆ ಪ್ರಾರಂಭವಾಗಲು ಇನ್ನೇನು ಕೆಲವೇ ಗಂಟೆಗಳಿರುವಂತೆಯೇ ಕಾಂಗ್ರೆಸ್ ಪಕ್ಷ ಎರಡು ಭಾಗವಾಗಿ ಒಡೆದು ಹೋಗುವುದು ಅನಿವಾರ್ಯವೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT