ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಮತದಾರರಲ್ಲಿ ಅರಿವಿನ ಕೊರತೆ: ಸಂಜೀವ್‌ ಕುಮಾರ್‌

ಮುಖ್ಯ ಚುನಾವಣಾಧಿಕಾರಿ ಸಂದರ್ಶನ
Last Updated 25 ಏಪ್ರಿಲ್ 2019, 5:57 IST
ಅಕ್ಷರ ಗಾತ್ರ

*ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಯುವಜನ ಏಕೆ ಹಿಂಜರಿಯುತ್ತಿದ್ದಾರೆ? ಇದಕ್ಕೆ ನಿರಾಸಕ್ತಿ ಕಾರಣವೇ?

ಯುವ ಮತದಾರರು ಕಡಿಮೆ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿರುವುದು ನಿಜ. ಆದರೆ, ಇದಕ್ಕೆ ನಿರಾಸಕ್ತಿ ಕಾರಣ ಎಂದು ಹೇಳಲಾರೆ. ಅರಿವಿನ ಕೊರತೆ ಅಥವಾ ಮಾಹಿತಿ ಇಲ್ಲದೆ ಹೆಸರು ನೋಂದಾಯಿಸುತ್ತಿಲ್ಲ. 2000 ಇಸವಿಯ ನವೆಂಬರ್‌– ಡಿಸೆಂಬರ್‌ ಮತ್ತು 2001ರ ಜನವರಿಯಲ್ಲಿ ಜನಿಸಿರುವ (18 ವರ್ಷ ವಯಸ್ಸಿಗೆ ಕಾಲಿಟ್ಟ) 15 ಲಕ್ಷಕ್ಕೂ ಹೆಚ್ಚು ಯುವಕ– ಯುವತಿಯರು ಹೆಸರು ನೋಂದಾಯಿಸಬೇಕಿತ್ತು. ಆದರೆ, 7.50 ಲಕ್ಷ ಜನ ಮಾತ್ರ ನೋಂದಾಯಿಸಿದ್ದಾರೆ.

* ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 2000 ಇಸವಿಯ ಜನವರಿಯಲ್ಲಿ ಜನಿಸಿದವರು ಎಷ್ಟು ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿದ್ದರು?

ವಿಧಾನಸಭಾ ಚುನಾವಣೆ ಸಂದರ್ಭದ ಆರಂಭದಲ್ಲಿ ಕಡಿಮೆ ಸಂಖ್ಯೆಯಲ್ಲಿ (6.50 ಲಕ್ಷ) ಹೆಸರು ನೋಂದಾಯಿಸಿದ್ದರು. ಆದರೆ, ಹೆಸರು ನೋಂದಣಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಬಳಿಕ ನೋಂದಣಿ ಮಾಡಿಕೊಂಡವರ ಸಂಖ್ಯೆ (8 ಲಕ್ಷ) ಹೆಚ್ಚಾಯಿತು.

* ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಪ್ರೋತ್ಸಾಹಿಸಲು ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ?

ಇದಕ್ಕಾಗಿ ಈಗಾಗಲೇ ಹಲವು ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಿದ್ದೇವೆ. ಮುಖ್ಯವಾಗಿ ಕಾಲೇಜುಗಳು, ಐಟಿಐ, ಪಾಲಿಟೆಕ್ನಿಕ್‌ ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಹೋಗಿ ಅಲ್ಲಿ, 18 ವರ್ಷಕ್ಕೆ ಕಾಲಿಟ್ಟ ಯುವಜನರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮನವಿ ಮಾಡುತ್ತಿದ್ದೇವೆ.

*ಇದಕ್ಕಾಗಿ ಪ್ರಚಾರಾಂದೋಲನ ಹಮ್ಮಿಕೊಳ್ಳುವ ಉದ್ದೇಶವಿದೆಯೇ?

ಇದೇ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಇದೆ. ಆ ದಿನದಿಂದಲೇ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲ ಭಾಗಗಳಲ್ಲೂ ನಡೆಸಲಾಗುವುದು. ವೈವಿಧ್ಯ ಕಾರ್ಯಕ್ರಮಗಳನ್ನು ರೂಪಿಸಿ ಮಾಧ್ಯಮಗಳ ಮೂಲಕ ಪ್ರಚುರಪಡಿಸುತ್ತೇವೆ. ಈಗಾಗಲೇ ದೂರದರ್ಶನದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆರಂಭಿಸಿದ್ದೇವೆ. ಯುವ ಐಕಾನ್‌ಗಳನ್ನೂ ಮತದಾನದ ಅರಿವು ಮೂಡಿಸಲು ಬಳಸಿಕೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT