ಜೀವನದಲ್ಲಿ ಹಣ ಎಷ್ಟು ಮುಖ್ಯ? ಜೀವನಕ್ಕೆ ಹಣ ಬೇಕು. ಆದರೆ ಹಣವೇ ಜೀವನ ಅಲ್ಲ. ಹಣದಿಂದ ಎಲ್ಲವನ್ನೂ ಕೊಳ್ಳಲು ಸಾಧ್ಯವಿಲ್ಲ. ಹಣದಿಂದ ಮಂಚ ಕೊಳ್ಳಬಹುದು. ಆದರೆ ನಿದ್ದೆ ಕೊಳ್ಳಲು ಸಾಧ್ಯವಿಲ್ಲ. ಹಣದಿಂದ ಔಷಧ ಕೊಳ್ಳಬಹುದು. ಆದರೆ ಆರೋಗ್ಯ ಕೊಳ್ಳಲು ಸಾಧ್ಯವಿಲ್ಲ. ಹಣದಿಂದ ಪುಸ್ತಕ ಕೊಳ್ಳಬಹುದು. ಆದರೆ ಜ್ಞಾನ ಕೊಳ್ಳಲು ಸಾಧ್ಯವಿಲ್ಲ. ಈ ದೇಹವನ್ನು ಹಣ ಗಳಿಕೆಗೆ ಅಲ್ಲದೆ ಇತರೆ ಒಳ್ಳೆಯ ಕೆಲಸಗಳಿಗೂ ಬಳಸಬೇಕು. ಬುದ್ಧಿಯನ್ನು ಚೆನ್ನಾಗಿ ಬಳಸಿಕೊಳ್ಳಬೇಕು.

ಇವತ್ತಿನ ಆವಿಷ್ಕಾರಗಳೆಲ್ಲ ಮನುಷ್ಯನ ಬುದ್ಧಿಯ ಆವಿಷ್ಕಾರಗಳು. ಇಂಟರ್ನೆಟ್ ಕೂಡಾ ಮನುಷ್ಯನ ಸಂಶೋಧನೆಯೆ. ಜಗತ್ತಿನ ಶ್ರೇಷ್ಠ ನಿರ್ಮಾಣಗಳಾದ ತಾಜ್ ಮಹಲ್, ಗೋಲ ಗುಂಬಜ್, ಚೀನಾ ಮಹಾ ಹೋಡೆ ಇರಬಹುದು, ಈಜಿಪ್ಟಿನ ಪಿರಮಿಡ್ಗಳಿರಬಹುದು, ಎಲ್ಲವೂ ಮನುಷ್ಯನ ಒಳ್ಳೆಯ ಬುದ್ಧಿಯ ಆವಿಷ್ಕಾರಗಳು. ನ್ಯೂಟನ್ ಬಗ್ಗೆ ನಿಮಗೆಲ್ಲಾ ಗೊತ್ತು. ಆತ ಚಲನೆಯ ನಿಯಮಗಳನ್ನು ಕಂಡು ಹಿಡಿದ. ಅವ ಒಂದು ದಿನ ಸೇಬು ಹಣ್ಣಿನ ಗಿಡದ ಬುಡದಲ್ಲಿ ಕುಳಿತಿದ್ದ. ಹಣ್ಣೊಂದು ಕೆಳಕ್ಕೆ ಬಿತ್ತು. ಅವ ಅದನ್ನು ತೆಗೆದುಕೊಂಡು ಜನರ ಬಳಿಗೆ ಹೋದ. ‘ಹಣ್ಣು ಗಿಡದಿಂದ ಕೆಳಕ್ಕೆ ಯಾಕೆ ಬಿತ್ತು’ ಎಂದು ಕೇಳಿದ. ಅದಕ್ಕೆ ಜನರು ‘ಹುಚ್ಚಾ ಹಣ್ಣು ಕೆಳಕ್ಕೆ ಬೀಳದೆ ಮೇಲೆಕ್ಕೆ ಹೋಗುತ್ತದೇನು?’ ಎಂದು ಪ್ರಶ್ನೆ ಮಾಡಿದರು. ‘ನಾನೂ ಅದನ್ನೇ ಕೇಳುತ್ತಿದ್ದೇನೆ. ಹಣ್ಣು ಕೆಳಕ್ಕೇ ಯಾಕೆ ಬಿತ್ತು. ಮೇಲಕ್ಕೆ ಯಾಕೆ ಹೋಗಲಿಲ್ಲ’ ಎಂದು ಕೇಳಿದ. ಅದೇ ಪ್ರಶ್ನೆಯನ್ನು ಇಟ್ಟುಕೊಂಡು ವಿಚಾರ ಮಾಡಿದ್ದರಿಂದ ಆತ ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಎನ್ನುವುದನ್ನು ಸಾಧಿಸಿ ತೋರಿಸಿದ. ಮನುಷ್ಯನ ಬುದ್ಧಿಶಕ್ತಿ ಅಷ್ಟು ಕೆಲಸ ಮಾಡುತ್ತದೆ.

ಗುರುತ್ವಾಕರ್ಷಣೆ ಶಕ್ತಿಯನ್ನು ಸಂಶೋಧಿಸಿದ್ದರಿಂದ ನ್ಯೂಟನ್ನನ್ನು ಬಹಳಷ್ಟು ಜನ ಭಾಷಣಕ್ಕೆ ಕರೆಯುತ್ತಿದ್ದರು. ಅವನ ವಾಹನದ ಚಾಲಕ ಒಂದು ದಿನ ನ್ಯೂಟನ್ ಗೆ ‘ಗುರುತ್ವಾಕರ್ಷಣೆ ಕಂಡು ಹಿಡಿದ ನಂತರ ಎರಡು ವರ್ಷಗಳಿಂದ ನಿಮ್ಮ ಭಾಷಣ ಕೇಳುತ್ತಾ ಇದ್ದೇನೆ. ಎಲ್ಲ ಕಡೆ ಒಂದೇ ವಿಷಯ ಮಾತನಾಡುತ್ತೀರಿ. ಈಗ ನೀವು ಮಾತನಾಡುವ ವಿಷಯವನ್ನು ನಾನೇ ಮಾತನಾಡಬಹುದು. ನನಗೆ ಅದು ಅಷ್ಟು ಅಭ್ಯಾಸವಾಗಿದೆ’ ಎಂದ. ಅದಕ್ಕೆ ನ್ಯೂಟನ್ ‘ಆಯ್ತು, ಮುಂದಿನ ಊರಿಗೆ ಹೋಗುತ್ತೀನಲ್ಲ. ಅಲ್ಲಿ ನೀನೇ ಭಾಷಣ ಮಾಡು. ಅಲ್ಲಿ ಯಾರಿಗೂ ನನ್ನ ಪರಿಚಯ ಇಲ್ಲ’ ಎಂದ. ಅದಕ್ಕೆ ಚಾಲಕ ಒಪ್ಪಿದ. ಮುಂದಿನ ಊರಿನಲ್ಲಿ ನ್ಯೂಟನ್ ತನ್ನ ಕೋಟ್ ಬಿಚ್ಚಿ ಚಾಲಕನಿಗೆ ಹಾಕಿ ಕಳಿಸಿದ. ಚಾಲಕನ ಸೀಟಿನಲ್ಲಿ ತಾನು ಕುಳಿತ. ಚಾಲಕ ಚೆನ್ನಾಗಿ ಮಾತನಾಡಿದ. ನಂತರ ಅಲ್ಲಿ ಸೇರಿದ್ದ ವಿಜ್ಞಾನಿಗಳು ಅವನಿಗೆ ಪ್ರಶ್ನೆ ಕೇಳಲು ಶುರು ಮಾಡಿದರು. ಅದಕ್ಕೆ ನ್ಯೂಟನ್ ವೇಷದಲ್ಲಿದ್ದ ಚಾಲಕ ‘ಇಷ್ಟು ಸಣ್ಣ ಪ್ರಶ್ನೆಗಳಿಗೆಲ್ಲ ನಾನು ಯಾಕೆ ಉತ್ತರ ಹೇಳಬೇಕು. ನನ್ನ ಚಾಲಕನೇ ಉತ್ತರ ಹೇಳುತ್ತಾನೆ’ ಎಂದ. ಮನುಷ್ಯನ ಬುದ್ಧಿಶಕ್ತಿ ಬಹಳ ತೀಕ್ಷ್ಣ ಇರುತ್ತದೆ. ಸಂಕಷ್ಟದಿಂದಲೂ ಅದು ಪಾರು ಮಾಡುತ್ತದೆ. ದೇಹವನ್ನು ಸರಿಯಾಗಿ ಬಳಸಿಕೊಳ್ಳುವುದು, ಬುದ್ಧಿಯನ್ನು ಸರಿಯಾಗಿ ಬಳಸಿಕೊಳ್ಳುವುದು ಮತ್ತು ದೇವರು ಕೊಟ್ಟ ಭಾವವನ್ನು ಸರಿಯಾಗಿ ಬಳಸಿಕೊಳ್ಳುವುದು ಜೀವನದಲ್ಲಿ ಬಹಳ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.