ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ನನ್ನ ಪರಿಚಿತರು ಕಳೆದ ನಾಲ್ಕು ವರ್ಷಗಳಿಂದ ನಗರ ಪ್ರದೇಶದಲ್ಲಿ ಸ್ವಂತ ಮನೆ ಹೊಂದುವ ಕನಸು ಕಾಣುತ್ತಿದ್ದಾರೆ. ಕನಸು ಕಾಣುವುದು ಮಾತ್ರವಲ್ಲದೆ, ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಗಗನಕ್ಕೇರುತ್ತಿರುವ ಬೆಲೆಯಿಂದಾಗಿ ಅವರಿಗೆ ನಿವೇಶನ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅದೆಷ್ಟೋ ಬಡಕುಟುಂಬ
ಗಳಿಗೆ ಸ್ವಂತ ಮನೆ ಗಗನಕುಸುಮವಾಗಿದೆ. ಹಣ ಇರುವವರು ಅವಶ್ಯಕತೆ ಇಲ್ಲದಿದ್ದರೂ ಒಂದಾದ ಮೇಲೊಂದು ನಿವೇಶನಗಳನ್ನು ಖರೀದಿಸುತ್ತಿರುವುದರಿಂದ ಈಗ ಭೂಮಿಯ ಬೆಲೆ ಆಕಾಶಕ್ಕೇರಿದೆ.

ಜಾಗತೀಕರಣದ ಈ ದಿನಗಳಲ್ಲಿ ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಆಸೆಪಡುತ್ತಿದ್ದಾನೆ. ಸರಳವಾಗಿ ಮತ್ತು ಹಿತ–ಮಿತವಾಗಿ ಬದುಕುವುದನ್ನು ಇಷ್ಟಪಡುತ್ತಿಲ್ಲ. ಬದುಕಿನ ಸುಖ, ಸಂತೋಷಗಳನ್ನು ಭೌತಿಕ ವಸ್ತುಗಳಲ್ಲಿ ಹುಡುಕುತ್ತಿದ್ದಾನೆ. ಭೌತಿಕವೇ ಪ್ರಧಾನವಾದ ಬದುಕಿನಲ್ಲಿ ಸರಳವಾಗಿ ಬದುಕುವವರು ಜನರ ದೃಷ್ಟಿಗೆ ಮೂರ್ಖರಂತೆ ಗೋಚರಿಸುತ್ತಾರೆ. ಕೊಳ್ಳುಬಾಕ ಸಂಸ್ಕೃತಿ ಸಮಾಜವನ್ನು ಆವರಿಸಿದೆ. ಕಣ್ಣಿಗೆ ಕಾಣಿಸಿದ್ದನ್ನೆಲ್ಲ ಖರೀದಿಸುವ ಧಾವಂತ ಜನರಲ್ಲಿ ಮನೆ ಮಾಡಿದೆ. ಬೇಡಿಕೆ ಹೆಚ್ಚುತ್ತಿದ್ದಂತೆ ವಸ್ತುವಿನ ಬೆಲೆ ಗಗನಕ್ಕೆ ಏರುತ್ತಿದೆ. ನಿವೇಶನ, ಚಿನ್ನ, ಬೆಳ್ಳಿಮತ್ತಿತರ ವಸ್ತುಗಳ ಬೆಲೆ ಅಧಿಕವಾಗುತ್ತಿರುವುದಕ್ಕೆ ಜನರು ಅವಶ್ಯಕತೆಗಿಂತ ಹೆಚ್ಚು ಖರೀದಿಸುತ್ತಿರುವುದೇ ಕಾರಣ ಆಗಿದೆ.

ಪ್ರಸ್ತುತ ಸಮಾಜದಲ್ಲಿ ಮದುವೆ ಎನ್ನುವುದು ಪ್ರತಿಷ್ಠೆಯ ಸಂಗತಿ ಆಗಿದೆ. ಐಷಾರಾಮಿ ಕಲ್ಯಾಣ ಮಂಟಪ, ವಿದ್ಯುದ್ದೀಪಗಳ ಅಲಂಕಾರ, ಆಕಾಶದಲ್ಲಿ ಬಾಣ ಬಿರುಸುಗಳ ಚಿತ್ತಾರ, ಕಿವಿಗಡಚಿಕ್ಕುವ ವಾದ್ಯಮೇಳ, ಹಲವು ಬಗೆಯ ಖಾದ್ಯಗಳ ತಯಾರಿ – ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದಾಗಲೇ ಅದೊಂದು ಮದುವೆ ಮತ್ತು ಗಂಡು–ಹೆಣ್ಣಿನ ದಾಂಪತ್ಯಕ್ಕೆ ಸಮಾಜದ ಒಪ್ಪಿಗೆಯ ಮುದ್ರೆ ಲಭ್ಯವಾದಂತೆ ಎನ್ನುವ ಭಾವನೆ ಅನೇಕ
ಪೋಷಕರಲ್ಲಿ ಮನೆ ಮಾಡಿದೆ. ಈಗೀಗ ಮದುವೆ ಮಾತ್ರ ಅಲ್ಲದೆ, ನಿಶ್ಚಿತಾರ್ಥ, ನಾಮಕರಣ, ಸೀಮಂತ, ಹುಟ್ಟುಹಬ್ಬ ದಂಥ ಕಾರ್ಯಕ್ರಮಗಳನ್ನೂ ಐಷಾರಾಮಿ ಕಲ್ಯಾಣ ಮಂಟಪಗಳಲ್ಲಿ ಆಚರಿಸಲಾಗುತ್ತಿದೆ. ವೈಕುಂಠ ಸಮಾರಾಧನೆಯಂಥ ಶೋಕಕ್ಕೂ ಕಲ್ಯಾಣ ಮಂಟಪಗಳು ವೇದಿಕೆಯಾಗುತ್ತಿವೆ. ಕೆಲವರ ಬದುಕಿನ ದುಬಾರಿತನ ಅದೆಷ್ಟೋ ಕುಟುಂಬಗಳ ಬದುಕನ್ನು ದಾರುಣಗೊಳಿಸಿದೆ.

ಶಿಕ್ಷಣದ ಮೂಲಕ ಮಕ್ಕಳಿಗೆ ಬದುಕಿನ ಸರಳತೆಯ ಪಾಠ ಬೋಧಿಸಲು ಸಾಧ್ಯವಾಗದಷ್ಟು ಶೈಕ್ಷಣಿಕ ವಾತಾವರಣ ದುಬಾರಿತನದಿಂದ ಕೂಡಿದೆ. ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಮಕ್ಕಳ ಊಟ, ಉಡುಪು, ವರ್ತನೆಯಲ್ಲಿ ಶ್ರೀಮಂತಿಕೆಯ ಛಾಯೆ ಕಡ್ಡಾಯವಾಗಿ ಗೋಚರಿಸಬೇಕು. ಮಕ್ಕಳ ಊಟದ ಡಬ್ಬಿಯಲ್ಲಿನ ತಿಂಡಿ ತಿನಿಸುಗಳನ್ನು ಸಹ ಶಿಕ್ಷಕರೇ ನಿರ್ಧರಿಸುವರು. ಶ್ರೀಮಂತ ಜೀವನಶೈಲಿಗೆ ವಿರುದ್ಧ
ವಾಗಿ ಮಕ್ಕಳು ವರ್ತಿಸಿದಲ್ಲಿ ಅದೊಂದು ಶಿಕ್ಷಾರ್ಹ ಅಪರಾಧವೆಂದು ಪರಿಗಣನೆಗೊಳಗಾಗುತ್ತದೆ. ಇಂಥ ವಾತಾವರಣದಲ್ಲಿ ಮಕ್ಕಳಿಗೆ ಬದುಕಿನ ಸರಳತೆಯ ಪಾಠ ಮಾಡುವುದು ಅಸಾಧ್ಯದ ಮಾತು. ಇಂದಿನ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಗಾಂಧೀಜಿ ಬದುಕಿನ ಸರಳತೆ ಪಠ್ಯಕ್ಕೆ ಸೀಮಿತ
ಆಗಿದೆಯೇ ಹೊರತು, ಪ್ರಾಯೋಗಿಕ ಅನುಕರಣೆಗಲ್ಲ.

ಮದುವೆಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಕುವೆಂಪು ‘ಮಂತ್ರಮಾಂಗಲ್ಯ’ ಪದ್ಧತಿ ಪರಿಚಯಿಸಿದರು. ಉತ್ತರ ಕರ್ನಾಟಕದ ಹಲವು ಮಠಗಳಲ್ಲಿ ಮದುವೆಯ ಸಂದರ್ಭ ಅಕ್ಕಿಕಾಳುಗಳನ್ನು ಅಕ್ಷತೆಯ ರೂಪದಲ್ಲಿ ವಧು –ವರರ ಮೇಲೆ ಪ್ರೋಕ್ಷಿಸುವ ಬದಲು, ಹೂವಿನ ಎಸಳುಗಳನ್ನು ಪ್ರೋಕ್ಷಿಸುವ ರೂಢಿಯನ್ನು ಅನುಸರಿಸುತ್ತಿರುವರು. ಇದು ಆಹಾರ ಪದಾರ್ಥವೊಂದು ಅನವಶ್ಯಕವಾಗಿ ವ್ಯಯವಾಗು
ವುದನ್ನು ತಡೆಗಟ್ಟುವ ಒಂದು ಉತ್ತಮ ಬೆಳವಣಿಗೆ. ಜನ್ಮದಿನ, ವಿವಾಹ ವಾರ್ಷಿಕೋತ್ಸವವನ್ನು ಆಡಂಬರದಿಂದ ಆಚರಿಸದೆ ಆ ದಿನ ಅನಾಥಾಶ್ರಮಗಳಲ್ಲಿ ಅನ್ನಸಂತರ್ಪಣೆ ಮಾಡುವುದನ್ನು ಅನೇಕರು ವ್ರತದಂತೆ ಪಾಲಿಸುತ್ತಾರೆ.

ಸರಳತೆಗೆ ಇವತ್ತಿಗೂ ಗಾಂಧೀಜಿ ಮಾದರಿ. ಮೈಮುಚ್ಚಲು ಬಟ್ಟೆ ಇಲ್ಲದ ಬಡವರನ್ನು ನೋಡಿದ ಅವರು ಪಂಚೆಯುಟ್ಟು ಅರೆಬೆತ್ತಲೆಯಾಗಿ ಬದುಕಿದರು. ದೇಶದಲ್ಲಿನ ಆಹಾರದ ಕೊರತೆ ನೀಗಿಸಲು ವಾರಕ್ಕೊಮ್ಮೆ ಉಪವಾಸವಿರುವಂತೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾಗರಿಕರಿಗೆ ಕರೆ ನೀಡಿದ್ದರು. ಉಪವಾಸವನ್ನು ಅವರು ‘ಧಾನ್ಯತ್ಯಾಗ’ ಎಂದು ಕರೆದರು. ಈ ಧಾನ್ಯ
ತ್ಯಾಗವನ್ನು ಸ್ವತಃ ಶಾಸ್ತ್ರಿ ಅವರು ಅನುಸರಿಸುವುದರ ಮೂಲಕ ಜನರಿಗೆ ಆದರ್ಶವೂ ಮಾದರಿಯೂ ಆಗುಳಿದರು.

ರಾಮಮನೋಹರ ಲೋಹಿಯಾ, ಜ್ಯೋತಿಬಸು, ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ, ಎಸ್. ನಿಜಲಿಂಗಪ್ಪ ಮುಂತಾದ ರಾಜಕಾರಣಿಗಳು ತಮ್ಮ ಸರಳತೆಯಿಂದ ಆದರ್ಶ ರಾಜಕಾರಣಿಗಳೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ, ಇಂದಿನ ರಾಜಕಾರಣದಲ್ಲಿ ಸರಳತೆ ದುರ್ಲಭವಾಗಿದೆ. ನಮ್ಮ ರಾಜಕಾರಣಿಗಳ ‘ಸರಳತೆ’ಯೂ ‘ದುಬಾರಿ’ ಎನ್ನುವುದಕ್ಕೆ ಅನೇಕ ನಿದರ್ಶನಗಳಿವೆ.

ನಮ್ಮ ಬದುಕಿನ ರೀತಿ ಇತರರ ಬದುಕಿಗೆ ಎರವಾಗದಂತೆ ಬದುಕುವುದು ಸದ್ಯದ ತುರ್ತು ಅಗತ್ಯವಾಗಿದೆ. ‘ಇನ್ನೊಬ್ಬನ ಜಾಗದಲ್ಲಿ ತನ್ನನ್ನು ಇರಿಸಿ ನೋಡುವ ಕಲ್ಪನಾಶಕ್ತಿ, ಅದರಿಂದಾಗಿ ಹುಟ್ಟುವ ಸಹಾನುಭೂತಿ ಮತ್ತು ತಿಳಿವು, ತನ್ನ ವಿಷಾದಕ್ಕೆ ಕಾರಣವಾದ ಪರಿಸ್ಥಿತಿಗೆ ಒಂದಿಲ್ಲ ಒಂದು ರೀತಿಯಿಂದ ತಾನೂ ಹೊಣೆಗಾರ ಎಂಬ ಅರಿವು– ನಾವು ಇತರರ ಬಗ್ಗೆ ಯೋಚಿಸುವ ರೀತಿಯನ್ನೇ ಬದಲಿಸಬಲ್ಲದು’ ಎಂದಿರುವರು ಯಶವಂತ ಚಿತ್ತಾಲರು. ಹಾಗೆ ನೋಡುವ ಗುಣ ಬೆಳೆಸಿಕೊಂಡಾಗಲೇ ಮನುಷ್ಯನಿಗೆ ತನ್ನ ಸರಳತೆಯಲ್ಲಿ ಬೇರೊಬ್ಬರ ಬದುಕಿದೆ ಎನ್ನುವ ಸತ್ಯ ಗೋಚರಿಸಬಲ್ಲದು.

ಸರಳತೆ ಎನ್ನುವುದು ನಮ್ಮ ಆರ್ಥಿಕ ಸ್ಥಿತಿಯನ್ನು ಅವಲಂಬಿಸದೆ, ಒಂದು ಮೌಲ್ಯದ ರೂಪದಲ್ಲಿ ನಮ್ಮ ಜೀವನದ ಭಾಗವಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.