ಕಳೆದ ಹನ್ನೊಂದು ವರ್ಷಗಳ ಅವಧಿಯಲ್ಲಿ ‘ದ್ವೇಷ ಭಾಷಣ’ಗಳ ಪ್ರಮಾಣ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಆತಂಕಕಾರಿ ಬೆಳವಣಿಗೆ.

ಬಹಿರಂಗ ಸಮಾವೇಶಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ದ್ವೇಷ ಭಾಷಣದ ಕ್ರೌರ್ಯ ಪ್ರದರ್ಶನವಾಗುತ್ತಿದೆ. ಅದು ಹಲ್ಲೆ, ಗುಂಪುಹತ್ಯೆಗೆ ಕಾರಣ ಆಗುತ್ತಿದೆ. ಹತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಎನ್ನುವ ವ್ಯಕ್ತಿಯನ್ನು ಗೋವಿನ ಮಾಂಸ ಸಂಗ್ರಹಿಸಿಟ್ಟಿದ್ದಾರೆ ಎನ್ನುವ ಗಾಳಿಸುದ್ದಿ ಕಾರಣಕ್ಕೆ ಗುಂಪುಹತ್ಯೆ ಮಾಡಲಾಯಿತು. ಇಪ್ಪತ್ತು ವರ್ಷಗಳ ಹಿಂದೆ ಕರ್ನಾಟಕದ ಆದಿ ಉಡುಪಿಯಲ್ಲಿ ಗೋ ರಕ್ಷಕರ ಹೆಸರಿನಲ್ಲಿ ಹಾಜಬ್ಬ, ಹಸನಬ್ಬ ಎಂಬ ತಂದೆ–ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು, ಬೆತ್ತಲೆ ಮೆರವಣಿಗೆ ಮಾಡಲಾಗಿತ್ತು.

‘ಇಂಡಿಯಾ ಸ್ಪೆಂಡ್’ ಸಂಸ್ಥೆ ನಡೆಸಿದ ದ್ವೇಷ ಭಾಷಣ ಆಧಾರಿತ ಘಟನೆಗಳ ಅಧ್ಯಯನದ ಪ್ರಕಾರ 2010–2017ರ ಅವಧಿಯಲ್ಲಿ– ಗೋವು ಸಂಬಂಧ ನಡೆಸಲಾದ ಹಲ್ಲೆ, ಹತ್ಯೆಗೆ ಒಳಗಾದವರಲ್ಲಿ ಶೇ 80ರಷ್ಟು ಮುಸ್ಲಿಮರಾಗಿದ್ದಾರೆ.

ಚರ್ಚ್ ಮೇಲೆ ದಾಳಿ, ದಲಿತರ ಮೇಲಿನ ದೌರ್ಜನ್ಯಗಳ ಹಲವು ಪ್ರಕರಣಗಳಲ್ಲಿ ಸಹ ದ್ವೇಷ ಭಾಷಣ ಮುಖ್ಯ ಕಾರಣ ಆಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ‘ದ್ವೇಷ ಭಾಷಣ, ದ್ವೇಷ ಅಪರಾಧ ನಿಯಂತ್ರಣ ಮಸೂದೆ 2025’ ಅನ್ನು ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.

ಮಸೂದೆಯ ಉದ್ದೇಶ ಉತ್ತಮಆಗಿದೆ. ಆದರೆ, ಸ್ಪಷ್ಟತೆ ಇಲ್ಲದ ಅಂಶಗಳು, ಅಪಾರದರ್ಶಕತೆ ಆತಂಕಕ್ಕೆ ಕಾರಣವಾಗಿದೆ. ದ್ವೇಷ ಭಾಷಣವು ನಂತರದಲ್ಲಿ ಗುಂಪು ಹತ್ಯೆ, ಹಿಂಸೆಗೆ ಕಾರಣವಾಗುತ್ತದೆ ಎನ್ನುವ ವಾಸ್ತವವನ್ನು ಮಸೂದೆ ಸ್ಪಷ್ಟವಾಗಿ ಹೇಳುವುದಿಲ್ಲ.

ಇಲ್ಲೊಂದು ಪ್ರಶ್ನೆಯೂ ಇದೆ. ಮತಧರ್ಮಾಂಧತೆ, ದ್ವೇಷ ಹರಡುವುದನ್ನು ತಡೆಯಲು ಕಾನೂನು ಅಗತ್ಯವಿರುವುದು ನಿಜ. ಆದರೆ, ಈಗಿರುವ ಕಾನೂನಿನ ಅಡಿಯಲ್ಲಿ ದ್ವೇಷ ಭಾಷಣವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಅನಿಸಿದೆಯೆ?

ಪರಿಣತರ ಜೊತೆಗೆ ಮಸೂದೆ ಕುರಿತು ಸರ್ಕಾರ ಚರ್ಚೆನಡೆಸಿದಂತೆ ಕಾಣುತ್ತಿಲ್ಲ. ವಿಧಾನಮಂಡಲದ ಸದನ
ಗಳಲ್ಲಿಯೂ ಮಸೂದೆ ಕುರಿತು ವಿಸ್ತೃತ ಚರ್ಚೆ ನಡೆಸಲಿಲ್ಲ. ಬಿಜೆಪಿಯವರ ನಿರಂಕುಶ ಪ್ರಭುತ್ವದ ದಾರಿಯನ್ನು ರಾಜ್ಯ ಸರ್ಕಾರವೂ ಅನುಸರಿಸಿರುವುದು ಸರಿಯೆ?

ಮುಖ್ಯವಾಗಿ, ಯಾವುದು ದ್ವೇಷ ಭಾಷಣ ಎಂದು ನಿರ್ಧರಿಸಲು ಇರುವ ಮಾನದಂಡಗಳೇನು? ಮತಧರ್ಮಾಂಧರ ದುಷ್ಟತನ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುತ್ವ ರಾಜಕಾರಣ, ಬ್ರಾಹ್ಮಣಶಾಹಿ ಎಂದು ವಿಮರ್ಶೆ ಮಾಡಿದರೆ ಅದನ್ನು ದ್ವೇಷ ಭಾಷಣ ಎಂದು ಬಂಧಿಸುವುದಿಲ್ಲ ಎನ್ನುವುದಕ್ಕೇನು ಗ್ಯಾರಂಟಿ? ಚಾತುರ್ವರ್ಣ ವ್ಯವಸ್ಥೆ, ಮನುಸ್ಮೃತಿಯನ್ನು ಟೀಕಿಸಿದರೆ ಅದು ದ್ವೇಷ ಭಾಷಣ ಎಂದು ಪರಿಗಣಿಸುವುದಿಲ್ಲ ಎನ್ನುವುದಕ್ಕೆ ಖಾತರಿ ಇಲ್ಲ. ಏಕೆಂದರೆ, ಅದನ್ನು ನಿರ್ಧರಿಸುವ ಮಾನದಂಡಗಳೇನು? ಬಿಜೆಪಿ ಕೈಯಲ್ಲಿ ಇದು ಎಂತಹ ಅಸ್ತ್ರ ಆಗಬಹುದು?

ಕೋರ್ಟ್ ವಿಚಾರಣೆಯಲ್ಲಿ ಆರೋಪಿತರು ‘ತಮ್ಮದು ದ್ವೇಷ ಭಾಷಣವಲ್ಲ’ ಎಂದು ತಾತ್ತ್ವಿಕವಾಗಿ, ಸೈದ್ಧಾಂತಿಕವಾಗಿ ಸಾಬೀತುಪಡಿಸಲು ಸಾಧ್ಯವೆ? ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರಗತಿಪರರು, ಸಾಮಾಜಿಕ ಹೋರಾಟಗಾರರ ಮೇಲೆ ಈ ಕಾಯ್ದೆ ಯಾವ ರೀತಿ ಪ್ರಯೋಗವಾಗಬಹುದು ಎಂದು ನಮ್ಮೆಲ್ಲರ ಅನುಭವಕ್ಕೆ ಬಂದಿದೆ.

ಯುಪಿಎ ಅವಧಿಯಲ್ಲಿ ತಂದ ಯುಎಪಿಎ, ಪಿಎಂಎಲ್ಎ ಕಾಯ್ದೆ ಇಂದಿನ ಕೇಂದ್ರ ಸರ್ಕಾರದ ಆಡಳಿತದಲ್ಲಿ ಇಂತಹ ಕರಾಳ ಶಾಸನಗಳಾಗಿವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿದೆಯಲ್ಲವೆ? ಈ ಮಸೂದೆಯೂ ಅದೇ ರೀತಿ ದುರ್ಬಳಕೆಯಾಗದೆ ಇರುವುದೆ?

ನೋಂದಣಿಯಾಗದ ಸಂಸ್ಥೆ, ಸಂಘಟನೆಗಳು ದ್ವೇಷ ಭಾವನೆ ಬಿತ್ತಿದರೆ ಬಂಧಿಸಬಹುದು ಎಂದು ಮಸೂದೆಯಲ್ಲಿ (clause 5) ಇದೆ; ಹೀಗಾಗಿ ಆರ್ಎಸ್ಎಸ್ ಸಹ ಇದರಿಂದ ಬಚಾವಾಗಲು ಸಾಧ್ಯವಿಲ್ಲ ಎಂದು ಹೇಳಬಹುದು. ಆದರೆ, ಇದೇ ರೀತಿ ನೋಂದಣಿಯಾಗದ ಅನೇಕ ಜನಪರ ವೇದಿಕೆ, ಸಂಘಟನೆಗಳಿವೆ. ದುರ್ಜನರು, ಸಜ್ಜನರು ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿ ತೂಗಿದರೆ ಪ್ರಜಾಪ್ರಭುತ್ವ ಉಳಿದೀತೆ?

ಮಸೂದೆಯಲ್ಲಿ ಪೊಲೀಸರಿಗೆ– ವ್ಯಕ್ತಿ, ಸಂಘಟನೆಗಳು ದ್ವೇಷ ಭಾಷಣ ಮಾಡುತ್ತಾರೆ ಎಂದು ಮುಂಚಿತವಾಗಿ ಅನಿಸಿದರೆ, ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಇದು ಮತಧರ್ಮಾಂಧರ ಜೊತೆಗೆ ಸರ್ಕಾರದ ಸಿದ್ಧಾಂತವನ್ನು, ನೀತಿಯನ್ನು ವಿಮರ್ಶಿಸುವ ಪ್ರಗತಿಪರ ಚಿಂತಕರು, ಸಾಮಾಜಿಕ ಕಾರ್ಯಕರ್ತರ ಮೇಲೂ ಪ್ರಯೋಗಗೊಳ್ಳಬಹುದು. ಇದು, ‘ಪೊಲೀಸ್ ರಾಜ್’ಗೆ ಮುನ್ನುಡಿ ಆಗಬಹುದಲ್ಲವೇ? ಸಂವಿಧಾನದ ವಿಧಿ 19(1)ರ ಉಲ್ಲಂಘನೆಯಲ್ಲವೆ?

ದ್ವೇಷ ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಆ ಗೆರೆಯನ್ನು ಪ್ರಸಕ್ತ ಮಸೂದೆ ಅಳಿಸಿಹಾಕಬಹುದು.

ಮತ್ತದೇ ಪ್ರಶ್ನೆ: ಈಗಿರುವ ಕಾನೂನನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲವೆ? ಪ್ರಸಕ್ತ ಕಾನೂನಿನಲ್ಲಿ ವೈಫಲ್ಯ ಎಲ್ಲಿದೆ ಎಂದು ಪತ್ತೆ ಹಚ್ಚಬೇಕಲ್ಲವೆ?

ಮಸೂದೆಯನ್ನು ತರಾತುರಿಯಲ್ಲಿ ಜಾರಿಗೊಳಿಸುವುದು ಬೇಡ; ಕೂಲಂಕಷವಾಗಿ ಸಮಾಲೋಚನೆ ಹಾಗೂ ಸಂವಾದವೇ ವಿವೇಕಯುತ ದಾರಿ ಎನ್ನುವುದನ್ನು ರಾಜ್ಯ ಸರ್ಕಾರ ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.