ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮೊಬೈಲ್ ಕ್ಲಿನಿಕ್‌: ಶಾಶ್ವತ ಪರಿಹಾರವಲ್ಲ

Last Updated 24 ಮೇ 2021, 19:50 IST
ಅಕ್ಷರ ಗಾತ್ರ

ಹಳ್ಳಿಗಳಿಗೆ ಇನ್ನು ಮೊಬೈಲ್ ಕ್ಲಿನಿಕ್ (ಪ್ರ.ವಾ., ಮೇ 24) ಎಂಬ ಸುದ್ದಿ, ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವುದು ಎಂಬ ಮಾತನ್ನು ನೆನಪಿಸುತ್ತದೆ. ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ಈ ಉಪಕ್ರಮ ಅನಿವಾರ್ಯವಾದರೂ ಮೊಬೈಲ್ ಸೌಲಭ್ಯಗಳು ಯಾವುದೇ ವ್ಯವಸ್ಥೆಗೆ ಶಾಶ್ವತ ಪರಿಹಾರವಲ್ಲ.

ಬಹುತೇಕ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ನಾಲ್ಕೈದು ಗ್ರಾಮಗಳ ಮಧ್ಯೆ ಒಂದು ಆರೋಗ್ಯ ಕೇಂದ್ರವಿದ್ದರೂ ಸರಿಯಾದ ಸೌಲಭ್ಯಗಳಿಲ್ಲ ಮತ್ತು ಸಿಬ್ಬಂದಿಯಿಲ್ಲ. ಗ್ರಾಮಗಳಲ್ಲಿನ ಆರೋಗ್ಯ ಕೇಂದ್ರಗಳು ಐಸಿಯುನಲ್ಲಿನ ರೋಗಿಯ ಸ್ಥಿತಿಯಲ್ಲಿವೆ. ಆರೋಗ್ಯ ರಕ್ಷಣೆಗೆ ದೇಶ ಇನ್ನಾದರೂ ಹೆಚ್ಚು ಹೂಡಿಕೆ ಮಾಡಿ ಗ್ರಾಮೀಣ ಭಾರತದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲಿ.

-ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT