ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ವಾಯುಪಡೆಯ 2 ವಿಮಾನ ನಾಶ

Published 28 ಮೇ 2024, 1:24 IST
Last Updated 28 ಮೇ 2024, 1:24 IST
ಅಕ್ಷರ ಗಾತ್ರ

ವಾಯುಪಡೆಯ 2 ವಿಮಾನ ನಾಶ

ನವದೆಹಲಿ, ಮೇ 27 (ಪಿಟಿಐ, ಯುಎನ್‌ಐ)– ಜಮ್ಮು–ಕಾಶ್ಮೀರದ ಕಾರ್ಗಿಲ್ ವಲಯದಿಂದ ಪಾಕಿಸ್ತಾನ ಬೆಂಬಲಿತ ಉಗ್ರರನ್ನು ಹೊರ ಹಾಕಲು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ ಎರಡು ಮಿಗ್ ಯುದ್ಧ ವಿಮಾನಗಳು ನಾಶವಾಗಿವೆ. ಪಾಕಿಸ್ತಾನದ ಕ್ಷಿಪಣಿ ಒಂದು ವಿಮಾನವನ್ನು ಹೊಡೆದುರುಳಿಸಿದ್ದು, ಇನ್ನೊಂದು ತಾಂತ್ರಿಕ ದೋಷದಿಂದ ದುರಂತಕ್ಕೀಡಾಯಿತೆಂದು ರಕ್ಷಣಾ ಪಡೆ ಮೂಲ ತಿಳಿಸಿದೆ.

ಆದರೆ ಗಡಿ ಸೀಮೆ ಉಲ್ಲಂಘಿಸಿ ತಮ್ಮ ವ್ಯಾಪ್ತಿಯೊಳಕ್ಕೆ ನುಸುಳಿದ ಎರಡು ಯುದ್ಧ ವಿಮಾನಗಳನ್ನು ತಾನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಇದರಿಂದಾಗಿ ಎರಡೂ ದೇಶಗಳ ನಡುವೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಭಾರತದ ಬಂಧಿತ ಪೈಲಟ್ ಯುದ್ಧ ಕೈದಿ–ಪಾಕ್

ಇಸ್ಲಾಮಾಬಾದ್, ಮೇ 27 (ಪಿಟಿಐ, ಯುಎನ್‌ಐ)– ತಮ್ಮ ಪಡೆಗಳು ಬಂಧಿಸಿರುವ ಭಾರತದ ಮಿಗ್ ಯುದ್ಧ ವಿಮಾನವೊಂದರ ಚಾಲಕನನ್ನು ‘ಯುದ್ಧ ಕೈದಿ’ ಎಂದು
ಪರಿಗಣಿಸುವುದಾಗಿ ಪಾಕಿಸ್ತಾನ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT