ದೇಶದ ಅಭಿವೃದ್ಧಿಗೆ ಜನತಾ ದಳದಲ್ಲಿ ಯೋಜನೆ ಇಲ್ಲ

ಬೆಂಗಳೂರು, ನ. 28– ರಾಷ್ಟ್ರವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠವಾಗಿ ರೂಪಿಸಲು ತೊಡಗಿರುವ ಕಾಂಗ್ರೆಸ್ ಸರ್ಕಾರದ ನೀತಿ ನಿಲುವುಗಳ ಬಗೆಗೆ ಜನತಾದಳ ಜನತೆಯನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ಇಲ್ಲಿ ತರಾಟೆಗೆ ತೆಗೆದುಕೊಂಡರು.

ಸರ್ವ ಜನರನ್ನೂ ದೃಷ್ಟಿಯಲ್ಲಿಟ್ಟುಕೊಂಡ ಅಭಿವೃದ್ಧಿ ಪರವಾದ ಯೋಜನೆಗಳಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರ್ಥಿಕ, ಔದ್ಯಮಿಕವಾಗಿ ಹೊಸ ಶಕೆಯನ್ನೇ ಆರಂಭಿಸಿದೆ ಎಂದು ತಮ್ಮ ಸರ್ಕಾರದ ನೀತಿ ನಿಲುವುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಜನತಾದಳ ಸೇರಿದಂತೆ ಬೇರಾವ ಪಕ್ಷಗಳಿಗೂ ರಾಷ್ಟ್ರದ ಏಳಿಗೆಗೆ ಸ್ಪಷ್ಟವಾದ ಪರ್ಯಾಯ ನೀತಿಯೇ ಇಲ್ಲ ಎಂದು ದೂರಿದರು.

ಪ್ರಚಾರ ಇಂದು ಅಂತ್ಯ

ಬೆಂಗಳೂರು, ನ. 28– ರಾಜ್ಯ ವಿಧಾನಸಭೆಯ 109 ಸ್ಥಾನಗಳಿಗೆ ಡಿಸೆಂಬರ್ ಒಂದರಂದು ನಡೆಯಲಿರುವ ಎರಡನೇ ಸುತ್ತಿನ ಚುನಾವಣೆಯ ಪ್ರಚಾರಕಾರ್ಯ ನಾಳೆ ಸಂಜೆ 5ಕ್ಕೆ ಮುಕ್ತಾಯವಾಗಲಿದೆ. ಮೈಕಾಸುರನ ಹಾವಳಿ ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.