ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷದ ಹಿಂದೆ: ಕಾವೇರಿ ಸೂತ್ರಕ್ಕೆ ಜಯಾ ತಿರಸ್ಕಾರ, ಮತ್ತೆ ಚಿಕ್ಕಟ್ಟು

ಭಾನುವಾರ 9.8.1998
Published 8 ಆಗಸ್ಟ್ 2023, 23:30 IST
Last Updated 8 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಕಾವೇರಿ ಸೂತ್ರಕ್ಕೆ ಜಯಾ ತಿರಸ್ಕಾರ, ಮತ್ತೆ ಚಿಕ್ಕಟ್ಟು

ನವದೆಹಲಿ, ಆ. 8 (ಪಿಟಿಐ, ಯುಎನ್‌ಐ): ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಇದೇ ತಿಂಗಳು 12ರೊಳಗೆ ಯೋಜನೆಯೊಂದನ್ನು ಸಲ್ಲಿಸಲು ಕೇಂದ್ರ ಸಜ್ಜಾಗುತ್ತಿರುವ ಬೆನ್ನ ಹಿಂದೆಯೇ ಆಡಳಿತಾ ರೂಢ ಬಿಜೆಪಿ ಮಿತ್ರ ಪಕ್ಷವಾದ ಎಐಎಡಿಎಂಕೆ ಹಾಗೂ ಅದರ ಬೆಂಬಲಿಗ ಪಕ್ಷಗಳು ಈ ಯೋಜನೆಯನ್ನು ತಿರಸ್ಕರಿಸಿವೆ.

ಇದರಿಂದಾಗಿ ಕಾವೇರಿ ನೀರು ಹಂಚಿಕೆ ಸಂಬಂಧದಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಮಧ್ಯೆ ಶುಕ್ರವಾರ ಆದ ಒಪ್ಪಂದದ ಜಾರಿಗೆ ರಾಜಕೀಯ ತೊಡಕು ಎದುರಾಗಿದೆ.

ಊಹಾಪೋಹಕ್ಕೆ ಎಡೆಮಾಡಿಕೊಟ್ಟಿರುವ ‘ಕಿವಿಮಾತು’ ಸಭೆ

ಬೆಂಗಳೂರು, ಆ. 8– ಯಾವುದೇ ಗಳಿಗೆಯಲ್ಲಿ ಲೋಕಸಭೆಗೆ ಚುನಾವಣೆ ನಡೆಯಬಹುದೆಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನತಾದಳವನ್ನು ಬಲಪಡಿಸುವ ಉದ್ದೇಶದಿಂದ ಜಿಲ್ಲಾ ಅಧ್ಯಕ್ಷರು ಹಾಗೂ ಶಾಸಕರಿಗೆ ‘ಕಿವಿಮಾತು’ ಹೇಳಲು ಆಗಸ್ಟ್ 12 ಹಾಗೂ 13ರಂದು ನಗರದಲ್ಲಿ ಸಭೆ ಕರೆಯುವ ಸಂಭವವಿದ್ದು ಇದು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳು ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಜೆ.ಎಚ್‌.ಪಟೇಲರು, ಉಪ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಹಿರಿಯ ಸಚಿವರ ತಂಡದೊಂದಿಗೆ ಪಕ್ಷದ ವರಿಷ್ಠರು ಈ ವಿಚಾರದಲ್ಲಿ ಸುಧೀರ್ಘ ಚರ್ಚೆ ನಡೆಸಿದರೆಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT