ಸೋಮವಾರ, ಆಗಸ್ಟ್ 8, 2022
22 °C
25 ವರ್ಷಗಳ ಹಿಂದೆ ಶನಿವಾರ 15.6.1996

25 ವರ್ಷಗಳ ಹಿಂದೆ: ಶನಿವಾರ 15.6.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಕ್ಕಟ್ಟು ಪರಿಹರಿಸಲು
ಪಟೇಲ್ ರಾಜಿಸೂತ್ರ

ಬೆಂಗಳೂರು, ಜೂನ್ 14– ಜನತಾದಳದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಪರಿಣಾಮವಾಗಿ ಉದ್ಭವಿಸಿರುವ ಬಿಕ್ಕಟ್ಟು ಪರಿಹಾರಕ್ಕೆ ರಾಜಿಸೂತ್ರ ಕಂಡು
ಹಿಡಿಯಲು ಇಂದು ನಡೆದ ಮಂತ್ರಿ ಮಂಡಲ ಸಭೆಯು ಮುಖ್ಯಮಂತ್ರಿ
ಜೆ.ಎಚ್. ಪಟೇಲ್ ಅವರಿಗೆ ಸಂಪೂರ್ಣ
ಅಧಿಕಾರ ನೀಡಿತು.

ಉಚ್ಚಾಟನೆಗೆ ದೇವೇಗೌಡರೇ
ಕಾರಣ: ಹೆಗಡೆ ಆರೋಪ

ನವದೆಹಲಿ, ಜೂನ್ 14 (ಪಿಟಿಐ,  ಯುಎನ್ಐ)– ಪಕ್ಷದಿಂದ ತಮ್ಮನ್ನು ಉಚ್ಚಾಟಿಸಲು ಪ್ರಧಾನಿ ಎಚ್‌.ಡಿ. ದೇವೇಗೌಡ ಅವರೇ ಕಾರಣ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ
ಮತ್ತು ಜನತಾದಳದಿಂದ ಉಚ್ಚಾಟಿತರಾದ ರಾಮಕೃಷ್ಣ ಹೆಗಡೆ ಇಂದು ನೇರ ಆರೋಪ ಮಾಡಿದ್ದಾರೆ.

ಲೋಕಸಭೆಯಲ್ಲಿ ವಿಶ್ವಾಸಮತ ಪಡೆಯುವುದೇ ತಡ, ದೇವೇಗೌಡರು ತರಾತುರಿಯಲ್ಲಿ ತಮ್ಮನ್ನು ಪಕ್ಷದಿಂದ ಹೊರಹಾಕುವುದೇ ಅತ್ಯಂತ ಆದ್ಯತೆಯ ವಿಷಯವೆನ್ನುವ ಹಾಗೆ ಹಿರಿಯ ನಾಯಕರ ಮನವೊಲಿಸಲು ಅವರ ಮನೆಯಿಂದ ಮನೆಗೆ ಅಲೆದಾಡಿದರು ಎಂದು ಹೆಗಡೆ ದೂರಿದರು.

ಬೆಂಗಳೂರಿನಲ್ಲಿ ಕಟ್ಟಡ
ಕುಸಿದು 8 ಸಾವು

ಬೆಂಗಳೂರು, ಜೂನ್ 14– ಬೆಂಗಳೂರು ಮಹಾನಗರಪಾಲಿಕೆಗೆ ಸೇರಿದ ಜೆ.ಪಿ ನಗರ ಮಾರೇನಹಳ್ಳಿಯ ಪೌರ ಕಾರ್ಮಿಕ ವಸತಿ ಸಮುಚ್ಚಯದ ಒಂದು ಭಾಗ ಇಂದು
ಬೆಳಿಗ್ಗೆ ಸಂಪೂರ್ಣ ಕುಸಿದು ಬಿದ್ದು,
ಒಂದೇ ಕುಟುಂಬದ ಏಳು ಮಂದಿ ಸೇರಿ ಒಟ್ಟು 8 ಜನ ಸಜೀವ ಸಮಾಧಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು