ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ 06-08-1996

Last Updated 5 ಆಗಸ್ಟ್ 2021, 17:42 IST
ಅಕ್ಷರ ಗಾತ್ರ

ಕಾವೇರಿ ವಿವಾದ: ಲಭ್ಯ ನೀರು ಹಂಚಿಕೆಗೆ ‘ತಾತ್ಕಾಲಿಕ ಒಪ್ಪಂದ’

ಮದ್ರಾಸ್, ಆ. 5– ಉಭಯ ರಾಜ್ಯಗಳ ರೈತರ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ ಇರುವ ನೀರನ್ನು ಎರಡೂ ಕಡೆಯವರು ಪರಸ್ಪರ ಲಾಭವಾಗುವಂತೆ ಹಂಚಿಕೊಳ್ಳುವ ‘ತಾತ್ಕಾಲಿಕ ವ್ಯವಸ್ಥೆ’ಗೆ ಕರ್ನಾಟಕ ಮುಖ್ಯಮಂತ್ರಿ ಜೆ.ಎಚ್. ಪಟೇಲ್
ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಇಂದು ಇಲ್ಲಿ ಒಪ್ಪುವ ಮೂಲಕ, ಶತಮಾನದಷ್ಟು ಹಳೆಯ ಶೀತಲ ಸಮರಕ್ಕೆ ತೆರೆ ಎಳೆದರು.

ಕಾವೇರಿ ವಿವಾದ ಬಗೆಹರಿಸಿಕೊಳ್ಳುವ ವಿಚಾರದಲ್ಲಿ ಇಬ್ಬರೂ ಮುಖ್ಯಮಂತ್ರಿಗಳು ಮಾತುಕತೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ತಲೆಬಾಗಿ ಇಂದಿನ ಸಭೆ ನಡೆಯಿತು ಎಂದು ಪಟೇಲ್ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಸಿಬಿಐ ತನಿಖೆಗೆ ಪ್ರಧಾನಿ ಆದೇಶ

ನವದೆಹಲಿ, ಆ. 5 (ಯುಎನ್‌ಐ)– ರಾಜಕೀಯ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪ್ರಧಾನಿ ಎಚ್‌.ಡಿ. ದೇವೇಗೌಡರು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT