ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ರಾಜ್ಯದ ನಾಲ್ಕು ಹೊಸ ರೈಲು ಮಾರ್ಗ ಯೋಜನೆಗೆ ಒಪ್ಪಿಗೆ

25 ವರ್ಷ (5-02-1999) (ಶುಕ್ರವಾರ)
Published 4 ಫೆಬ್ರುವರಿ 2024, 20:20 IST
Last Updated 4 ಫೆಬ್ರುವರಿ 2024, 20:20 IST
ಅಕ್ಷರ ಗಾತ್ರ

ರಾಜ್ಯದ ನಾಲ್ಕು ಹೊಸ ರೈಲು ಮಾರ್ಗ ಯೋಜನೆಗೆ ಒಪ್ಪಿಗೆ

ನವದೆಹಲಿ, ಫೆ. 4– ಕರ್ನಾಟಕದ ನಾಲ್ಕು ಹೊಸ ರೈಲು ಮಾರ್ಗಗಳು ಸೇರಿದಂತೆ ಒಟ್ಟು ಹನ್ನೆರಡು ಯೋಜನೆಗಳಿಗೆ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು ಇಂದು ಒಪ್ಪಿಗೆ ನೀಡಿತು. 

ಅವುಗಳೆಂದರೆ, ಬೆಂಗಳೂರು–ಸತ್ಯಮಂಗಲ (271 ಕಿ.ಮೀ), ಬೀದರ್‌– ಕಲ್ಬುರ್ಗಿ (116 ಕಿ. ಮೀ), ರಾಯಚೂರು–ಆಂಧ್ರಪ್ರದೇಶದ ಗಢವಾಲ್‌ (60 ಕಿ.ಮೀ), ಯಶವಂತಪುರ– ತುಮಕೂರು (64 ಕಿ.ಮೀ). 

ಭಿನ್ನಮತೀಯ ಚಟುವಟಿಕೆಗೆ ಮುಖ್ಯಮಂತ್ರಿ ನಿರ್ಲಕ್ಷ್ಯ

ಬೆಂಗಳೂರು, ಫೆ. 4– ‘ಪಕ್ಷದ ಭಿನ್ನಮತೀಯ ಚಟುವಟಿಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳವುದಿಲ್ಲ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಆಡಳಿತ ಯಂತ್ರವನ್ನು ಚುರುಕುಗೊಳಿ
ಸುವಲ್ಲಿ ಮಗ್ನನಾಗಿದ್ದೇನೆ’ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೇಳಿದರು. 

ಪಕ್ಷದಲ್ಲಿ ಪ್ರಾರಂಭವಾಗಿರುವ ಭಿನ್ನಮತೀಯ ಚಟುವಟಿಕೆಗಳ ಬಗ್ಗೆ ಇಂದು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಪತ್ರಕರ್ತರು ಅವರ ಗಮನ ಸೆಳೆದಾಗ, ಪಟೇಲ್ ಈ ಪ್ರತಿಕ್ರಿಯೆ ನೀಡಿದರು. 

‘ಭಿನ್ನಮತೀಯ ಚಟುವಟಿಕೆಗಳ ಬಗ್ಗೆ ಇಂದಿನ ಪತ್ರಿಕೆಗಳಲ್ಲಿ ನೋಡಿದ್ದೇನೆ. ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿಯದು. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಪಕ್ಷದಲ್ಲಿ ಶಿಸ್ತು ಇರಬೇಕು. ಇದು ಪ್ರಜಾಪ್ರಭುತ್ವ ಅಲ್ಲವೇ, ಆದ್ದರಿಂದ ಅವರಿಗೆ ಏನು ಮಾಡಬೇಕೆಂದು ಅನ್ನಿಸು
ತ್ತದೆಯೋ ಅದನ್ನು ಮಾಡಿಕೊಳ್ಳಲಿ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT