ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಜಾರ್ಜ್ ಖಾತೆ ಬದಲಾವಣೆಗೆ ಜಯಲಲಿತಾ ಪಟ್ಟು

Published 29 ಮಾರ್ಚ್ 2024, 23:08 IST
Last Updated 29 ಮಾರ್ಚ್ 2024, 23:08 IST
ಅಕ್ಷರ ಗಾತ್ರ

ಜಾರ್ಜ್ ಖಾತೆ ಬದಲಾವಣೆಗೆ ಜಯಲಲಿತಾ ಪಟ್ಟು

ನವದೆಹಲಿ, ಮಾರ್ಚ್ 29 (ಯುಎನ್‌ಐ, ಪಿಟಿಐ)– ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್‌ ಅವರನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂದು ಪ್ರಧಾನಿ ಎ.ಬಿ. ವಾಜಪೇಯಿ ಅವರು ನಿನ್ನೆ ಖಡಾಖಂಡಿತ ವಾಗಿ ಘೋಷಿಸಿದ್ದರೂ, ರಾಷ್ಟ್ರದ ಭದ್ರತೆ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಜಾರ್ಜ್ ಅವರ ಖಾತೆ ಬದಲಾಯಿಸಬೇಕು ಎಂದು ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೇಲಿನ ತಮ್ಮ ಒತ್ತಡವನ್ನು ತೀವ್ರಗೊಳಿಸಿದ್ದಾರೆ.

ಇಂದು ಬೆಳಿಗ್ಗೆ ವಾಜಪೇಯಿ ಅವರೊಡನೆ ಜಯಲಲಿತಾ ಅವರು ಒಂದು ಗಂಟೆ ಕಾಲ ಮಾತುಕತೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಬಹಿರಂಗ ಹೇಳಿಕೆ ನೀಡಿದ್ದು, ಜಾರ್ಜ್ ಫರ್ನಾಂಡಿಸ್ ಅವರಿಗೆ ಕಡಿಮೆ ಮಹತ್ವದ ಖಾತೆ ನೀಡುವಂತೆ ಆಗ್ರಹಿಸಿದ್ದಾರೆ.

ರೈತರಿಗೆ ಶಾಪವಾಗಿರುವ ಮಲಿನ ವೃಷಭಾವತಿ

ಬೆಂಗಳೂರು, ಮಾರ್ಚ್ 29– ಒಂದು ಕಾಲಕ್ಕೆ ಜೀವವಾಹಿನಿಯಾಗಿ ರೈತರಿಗೆ ವರವಾಗಿದ್ದ ವೃಷಭಾವತಿ ನದಿ ಈಗ ಮಾಲಿನ್ಯದಿಂದ ಬಗ್ಗಡಗೊಂಡು ಅವರ ಪಾಲಿಗೆ ಶಾಪವಾಗಿ ಸಾವಿರಾರು ಎಕರೆ ಫಲವತ್ತಾದ ಜಮೀನು ಬಂಜರು ಭೂಮಿಯಾಗಿದೆ.

ಕನಕಪುರ, ರಾಮನಗರ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕುಗಳ ಅನೇಕ ಹಳ್ಳಿಗಳಿಗೆ ‘ಪ್ರಜಾವಾಣಿ’ ಇಂದು ಭೇಟಿ ನೀಡಿದಾಗ, ವೃಷಭಾವತಿ ನದಿ ನೀರನ್ನು ಬಳಸಿ ಭೂಮಿ ಮತ್ತು ಬೆಳೆಯನ್ನು ಹಾಳು ಮಾಡಿಕೊಂಡ ರೈತರು ತಮ್ಮ ಗೋಳನ್ನು ತೋಡಿಕೊಂಡು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT