ಬೆಂಗಳೂರು, ಸೆ. 24– ಕೇಂದ್ರ ಕಚೇರಿಯೂ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿರುವ ಭವಿಷ್ಯನಿಧಿ ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದರು.
ಸಿಬಿಐ ಡಿವೈಎಸ್‌ಪಿ ಕೆ.ವೈ. ಗುರುಪ್ರಸಾದ್ ನೇತೃತ್ವದಲ್ಲಿ ಪೀಣ್ಯ, ಕೆ.ಆರ್.ಪುರಂ, ಬೊಮ್ಮಸಂದ್ರದಲ್ಲಿನ ಕಚೇರಿಗಳು ಮತ್ತು ಕೇಂದ್ರ ಕಚೇರಿ ಮೇಲೆ ಏಕಕಾಲಕ್ಕೆ ವ್ಯಾಪಕವಾಗಿ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 200 ಕೋಟಿ ರೂ.ಗಳ ಅವ್ಯವಹಾರ ಪತ್ತೆ ಮಾಡಿದ್ದಾರೆಂದು ಸಿಬಿಐ ಮೂಲಗಳು ತಿಳಿಸಿವೆ.