ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ರದ್ದು

Published 9 ಮಾರ್ಚ್ 2024, 1:04 IST
Last Updated 9 ಮಾರ್ಚ್ 2024, 1:04 IST
ಅಕ್ಷರ ಗಾತ್ರ

ನವದೆಹಲಿ, ಮಾರ್ಚ್ 8– ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ಸುಗ್ರೀವಾಜ್ಞೆಯನ್ನು ಇಂದು ರಾತ್ರಿ ವಾಪಸ್ ಪಡೆಯುವ ಮೂಲಕ, 24 ದಿನಗಳ ನಂತರ ರಾಬ್ಡಿದೇವಿ ನೇತೃತ್ವದ ರಾಷ್ಟ್ರೀಯ ಜನತಾದಳ ನೇತೃತ್ವದ ಸರ್ಕಾರದ ಪುನರ್ ಪ್ರತಿಷ್ಠಾಪನೆಗೆ ದಾರಿ ಮಾಡಿಕೊಡಲಾಯಿತು.

ರಾಷ್ಟ್ರಪತಿ ಆಳ್ವಿಕೆಯ ಆಜ್ಞೆಯನ್ನು ಹಿಂತೆಗೆದುಕೊಂಡಿರುವುದನ್ನು ಗೃಹ ಸಚಿವ ಅಡ್ವಾಣಿ ಲೋಕಸಭೆಗೆ ಮುಜುಗರದಿಂದ ತಿಳಿಸಿದರು. ಪ್ರಧಾನಿ ವಾಜಪೇಯಿ ಅವರು ರಾಜ್ಯಸಭೆಯಲ್ಲಿ ಬಿಹಾರದ ಗೊತ್ತುವಳಿಗೆ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆಯಲು ಅದರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ನಡೆಸಿದ ಮಾತುಕತೆ ವಿಫಲವಾಗಿತ್ತು.

ಗೊತ್ತುವಳಿಯನ್ನು ವಿರೋಧಿ ಕಾಂಗ್ರೆಸ್ ಪಕ್ಷವು ರಾಜ್ಯಸಭೆಯಲ್ಲಿ ಬೆಂಬಲಿಸದೇ ಇರಲು ಕೈಗೊಂಡ ದೃಢ ನಿರ್ಧಾರದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಕೈಕಟ್ಟಿದಂತಾಯಿತು. ಇಂದು ಬೆಳಿಗ್ಗೆ ನಡೆದ ಸಚಿವ ಸಂಪುಟದ ಸಭೆಯು ರಾಷ್ಟ್ರಪತಿ ಆಜ್ಞೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT