ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಅಪಪ್ರಚಾರ: ಸೋನಿಯಾ ಖಂಡನೆ

Published 6 ಮೇ 2024, 23:21 IST
Last Updated 6 ಮೇ 2024, 23:21 IST
ಅಕ್ಷರ ಗಾತ್ರ

ಅಪಪ್ರಚಾರ: ಸೋನಿಯಾ ಖಂಡನೆ 

ನವದೆಹಲಿ, ಮೇ 6 (ಪಿಟಿಐ)– ತಮ್ಮ ವಿದೇಶಿ ಮೂಲದ ವಿಷಯದಲ್ಲಿ ‘ಕೀಳುಮಟ್ಟದ ಪ್ರಚಾರ’ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಭಾರತೀಯ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡು, ಇಂಥ ಪ್ರಚಾರ ಯಶಸ್ವಿಯಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

‘ಬಿಜೆಪಿಯು ಅನುಕಂಪದ ಅಲೆಯನ್ನು ಕೃತಕವಾಗಿ ಉತ್ಪಾದಿಸಲು ಯತ್ನಿಸುತ್ತಿದೆ. ನಮ್ಮ ವಿರುದ್ಧ ಬಲು ಕೀಳುಮಟ್ಟದ ಪ್ರಚಾರವನ್ನು ಪ್ರಾರಂಭಿಸಿದೆ. ಇದು ಅವರ ಭಯ, ಅಭದ್ರತೆಯ ಭಾವನೆಯನ್ನೂ ಬಯಲುಗೊಳಿ
ಸುತ್ತದೆ’ ಎಂದು ಅವರು ವಿವಿಧ ರಾಜ್ಯಗಳ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ಸಭೆಯಲ್ಲಿ ಹೇಳಿದರು. 

ಬಾದಾಮಿ: ಭಾರಿ ಗಾಳಿ, ಮಳೆ

ಬಾದಾಮಿ, ಮೇ 6– ಕಳೆದ ರಾತ್ರಿ ಬೀಸಿದ ಭಾರಿ ಗಾಳಿ ಹಾಗೂ ಸುರಿದ ಮಳೆಯಿಂದಾಗಿ ಓರ್ವ ಅಸುನೀಗಿದ್ದು, ಹಲವಾರು ಮರಗಳು ನೆಲಕ್ಕೆ ಉರುಳಿವೆ. 

ಒಂದೇ ದಿನದಲ್ಲಿ ಸುಮಾರು 27 ಮಿ.ಮೀ. ಮಳೆಯಾಗಿದ್ದು, ಅಪಾರ ಮಾವಿನ ಫಸಲು ನೆಲಕಚ್ಚಿದೆ. ಸುಮಾರು ಮೂರು ತಾಸು ರಸ್ತೆಸಂಚಾರ ಸ್ಥಗಿತಗೊಂಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT