ಹಠಾತ್ ಭೇಟಿ – ಸಚಿವರಿಗೆ ದೇವೇಗೌಡ ಸೂಚನೆ ರಾಜ್ಯದಲ್ಲಿ ಆಡಳಿತ ಚುರುಕಿಗೆ ತೀವ್ರ ಕ್ರಮ

ನವದೆಹಲಿ, ಡಿ. 22– ತಾಲ್ಲೂಕು ಮಟ್ಟದಲ್ಲಿ ಆಡಳಿತವೇ ಇಲ್ಲ ಎನ್ನುವಂತಿರುವ ಕರ್ನಾಟಕದಲ್ಲಿನ ಸರ್ಕಾರಿ ಯಂತ್ರವನ್ನು ಚುರುಕುಗೊಳಿಸಿ ಜನಸಾಮಾನ್ಯರಿಗೆ ಸ್ಪಂದಿಸುವಂತೆ ಮಾಡಲು ತಿಂಗಳಿಗೆ
ತಾವು ಹತ್ತು ದಿನ ಪ‍್ರವಾಸ ಮಾಡುವುದಲ್ಲದೆ ಪ್ರತಿಯೊಬ್ಬ ಸಚಿವರು ಮತ್ತು ಇಲಾಖೆಗಳ ಮುಖ್ಯಸ್ಥರು ಆಗಿಂದಾಗ್ಗೆ ಪ್ರವಾಸ ಮಾಡಿ ಕಚೇರಿಗಳಿಗೆ ಹಠಾತ್ ಭೇಟಿ ನೀಡುವ ಮೂಲಕ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು ಇಂದು ಇಲ್ಲಿ ತಿಳಿಸಿದರು.

ದೆಹಲಿಯಲ್ಲಿ ಇರುವ ಕರ್ನಾಟಕ ಪತ್ರಕರ್ತರನ್ನು ಕರೆದು ತಮ್ಮ ಸರ್ಕಾರದ ಮುನ್ನೋಟದ ಬಗೆಗೆ ಮಾತನಾಡಿದ ಅವರು, ಸಚಿವರು ಮತ್ತು ಹಿರಿಯ ಅಧಿಕಾರಿಗಳು ತಮ್ಮ ಪ್ರವಾಸ ಕಾಲದಲ್ಲಿ ನಡೆಸುವ ತನಿಖೆಯಿಂದ ಗೊತ್ತಾಗುವ ಮಾಹಿತಿಯನ್ನು ತಮಗೆ ವರದಿ ಮಾಡು
ವರು, ತಪ್ಪಿತಸ್ಥ ಅಧಿಕಾರಿ ಯಾವುದೇ ಜಾತಿಗೆ ಸೇರಿದ್ದರೂ ಯಾವ ವಿನಾಯಿತಿ
ಯನ್ನೂ ನೀಡದೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಂಕರಾನಂದ, ಕಲ್ಪನಾಥ ರಾಯ್, ಠಾಕೂರ್ ರಾಜೀನಾಮೆ

ನವದೆಹಲಿ, ಡಿ. 22 (ಪಿಟಿಐ, ಯುಎನ್‌ಐ)– ಹಗರಣಗಳಲ್ಲಿ ಸಿಲುಕಿ ದೋಷಾರೋಪಣೆಗೆ ಒಳಗಾಗಿರುವ ಕೇಂದ್ರ ಆರೋಗ್ಯ ಸಚಿವ ಬಿ. ಶಂಕರಾನಂದ, ಆಹಾರ ಖಾತೆ ರಾಜ್ಯ ಸಚಿವ ಕಲ್ಪನಾಥ ರಾಯ್ ಹಾಗೂ ಗ್ರಾಮೀಣ ಅಭಿವೃದ್ಧಿ ಖಾತೆ ರಾಜ್ಯ ಸಚಿವ ರಾಮೇಶ್ವರ ಠಾಕೂರ್ ಅವರನ್ನು ಪ್ರಧಾನಿ ಅವರು ಇಂದು ತಮ್ಮ ಸಂಪುಟದಿಂದ ಕೈಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.