ಶನಿವಾರ, ನವೆಂಬರ್ 28, 2020
26 °C

ಪ್ರಜಾವಾಣಿ 25 ವರ್ಷಗಳ ಹಿಂದೆ| ಶುಕ್ರವಾರ, 3–11–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀರಪ್ಪನ್‌ ಷರತ್ತಿಗೆ ಇಂದು ತಮಿಳುನಾಡು ಉತ್ತರ

ಈರೋಡ್‌, ನ. 2 (ಪಿಟಿಐ)– ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಯನ್ನು ಅಪಹರಿಸಿರುವ ದಂತಚೋರ ವೀರಪ್ಪನ್‌ ತಂಡದ ಬೇಡಿಕೆಗಳಿಗೆ ತಮಿಳುನಾಡು ಸರ್ಕಾರ ನಾಳೆ ಉತ್ತರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

5 ವರ್ಷ ಸಿನಿಮಾ ನಿರ್ಷಧ: ಸ್ಪೀಕರ್‌ ಸಲಹೆ

ಬೆಂಗಳೂರು, ನ. 2– ‘ಭಾರತೀಯ ಯುವಜನಾಂಗದ ನಂಬರ್‌ ಒನ್‌ ಶತ್ರುವಾಗಿರುವ ಸಿನಿಮಾಗಳ ತಯಾರಿಕೆ, ಪ್ರದರ್ಶನವನ್ನು ಕಡೇಪಕ್ಷ ಐದು ವರ್ಷದ ಅವಧಿಗಾದರೂ ನಿಷೇಧಿಸಬೇಕಾದ’ ಅಗತ್ಯವನ್ನು ವಿಧಾನಸಭೆಯ ಅಧ್ಯಕ್ಷ ರಮೇಶ್‌ ಕುಮಾರ್‌ ಇಂದು ಇಲ್ಲಿ ಪ್ರತಿಪಾದಿಸಿದರು.

ಭಾರತೀಯ ವಿದ್ಯಾರ್ಥಿ ಫೆಡರೇಷನ್‌ ಆಶ್ರಯದಲ್ಲಿ ನಡೆದ ‘ಅಖಿಲ ಭಾರತ ಶೈಕ್ಷಣಿಕ ಸಮಾವೇಶ’ದ ಅಧ್ಯಕ್ಷತೆ ವಹಿಸಿದ್ದ ಅವರು, ತಾವು ಮೊದಲಿನಿಂದಲೂ ಸಿನಿಮಾ ಮತ್ತು ಟಿ.ವಿ ವಿರೋಧಿ ಎಂದು ಹೇಳಲಾಗುತ್ತಿದೆ. ಆದರೆ, ಈಗ ಬರುತ್ತಿರುವ ಸಿನಿಮಾಗಳನ್ನು ನೋಡಿದರೆ ಪ್ರತಿಯೊಬ್ಬರೂ ಅದನ್ನು ವಿರೋಧಿಸಬೇಕಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು