ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 7-5-1996

Last Updated 6 ಮೇ 2021, 19:30 IST
ಅಕ್ಷರ ಗಾತ್ರ

ಕಂಡಲ್ಲಿ ಗುಂಡು: ಇಂದು 183 ಸ್ಥಾನಗಳಿಗೆ ಮತದಾನ

ನವದೆಹಲಿ, ಮೇ 6 (ಪಿಟಿಐ, ಯುಎನ್‌ಐ)– ಹನ್ನೆರಡು ರಾಜ್ಯಗಳಲ್ಲಿ ವ್ಯಾಪಿಸಿರುವ 183 ಲೋಕಸಭೆ ಸ್ಥಾನಗಳು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ 154 ಸ್ಥಾನಗಳಿಗೆ ನಾಳೆ ಮೂರನೇ ಹಂತದಲ್ಲಿ ಮತದಾನ ನಡೆಸಲು ಸರ್ವ ಸಿದ್ಧತೆ ಮಾಡಲಾಗಿದ್ದು, ಬಿಹಾರ, ತ್ರಿಪುರಾ ರಾಜ್ಯಗಳಲ್ಲಿ ಮತ್ತು ಉತ್ತರಪ್ರದೇಶದ ಹಲವು ಭಾಗಗಳಲ್ಲಿ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ.

ಗೃಹ ಮಂಡಳಿ ಬಾಕಿ ವಸೂಲಿ ವಿಕ್ರಮ

ಬೆಂಗಳೂರು, ಮೇ 6– ಕರ್ನಾಟಕ ಗೃಹ ನಿರ್ಮಾಣ ಮಂಡಳಿ (ಕೆಎಚ್‌ಬಿ) ಅಸ್ತಿತ್ವಕ್ಕೆ ಬಂದ ಈ ಎರಡೂವರೆ ದಶಕಗಳಲ್ಲಿ ಮೊದಲ ಬಾರಿಗೆ 57 ಕೋಟಿ ರೂಪಾಯಿ ಹಣವನ್ನು ವಸೂಲು ಮಾಡಿ ದಾಖಲೆ ಸೃಷ್ಟಿಸಿದೆ.

ತಾನು ಕಟ್ಟಿ ವಿತರಣೆ ಮಾಡಿದ ಮನೆಗಳ ಬಾಕಿಯನ್ನು ಗ್ರಾಹಕರು ಕಟ್ಟದೇ ಉಳಿದುಕೊಂಡಿರುವ ಪ್ರಕರಣಗಳನ್ನು ಒಂದೊಂದಾಗಿ ಬಯಲಿಗೆ ಎಳೆಯುತ್ತಿರುವ ಮಂಡಳಿಯ ಕ್ರಮದಿಂದಾಗಿ ಈ ಬಾರಿ ವಸೂಲಾತಿ ಮೊತ್ತ ಈ ಪ್ರಮಾಣಕ್ಕೆ ಏರಿದೆ. ಮಂಡಳಿಗೆ ಇದುವರೆಗೆ ಗರಿಷ್ಠ ಎಂದರೆ 32 ಕೋಟಿ ರೂಪಾಯಿವರೆಗೆ ವಸೂಲು ಮಾಡಲು ಸಾಧ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT