ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಅತಿಕ್ರಮಣಕ್ಕೆ ತಡೆ, ಪ್ರಮುಖ ನೆಲೆ ವಶ

Published 31 ಮೇ 2024, 0:04 IST
Last Updated 31 ಮೇ 2024, 0:04 IST
ಅಕ್ಷರ ಗಾತ್ರ

ಅತಿಕ್ರಮಣಕ್ಕೆ ತಡೆ, ಪ್ರಮುಖ ನೆಲೆ ವಶ

ನವದೆಹಲಿ, ಮೇ 30 (ಪಿಟಿಐ, ಯುಎನ್ಐ)– ಜಮ್ಮು ಮತ್ತು ಕಾಶ್ಮೀರ ವಲಯದ ಬಟಾಲಿಕ್‌ನಲ್ಲಿ ಕಳೆದ ರಾತ್ರಿ ಪಾಕ್ ಅತಿಕ್ರಮಣಕಾರರು ಮತ್ತು ಸೇನೆಯ ಮಧ್ಯೆ ನಡೆದ ನೇರ ಹೋರಾಟದಲ್ಲಿ ಭಾರತೀಯ ಮೇಜರ್ ಒಬ್ಬರು ಮೃತಪಟ್ಟು, ಕನಿಷ್ಠ ಆರು ಮಂದಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಸತ್ತಿದ್ದಾರೆ.‌

ಈ ನಡುವೆ, ಕಾರ್ಗಿಲ್ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಉಪಶಮನಗೊಳಿಸಲು ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿನಿಧಿಯನ್ನು ಕಳುಹಿಸಿಕೊಡುವ ವಿಶ್ವಸಂಸ್ಥೆಯ ಪ್ರಧಾನ ಕಾರ‍್ಯದರ್ಶಿ ಕೋಫಿ ಅನ್ನಾನ್ ಅವರ ಸೂಚನೆಯನ್ನು ಭಾರತ ತಿರಸ್ಕರಿಸಿದೆ.

ಇಂಟರ್‌ನೆಟ್ ಪ್ರಕಟಣೆ: ಗೊಂದಲ

ಬೆಂಗಳೂರು, ಮೇ 30– ಎಸ್‌ಎಸ್‌ಎಲ್‌ಸಿ ಫಲಿತಾಂಶ ಅಧಿಕೃತವಾಗಿ ಶಾಲೆಗಳಲ್ಲಿ ಪ್ರಕಟ ಆಗುವುದಕ್ಕೆ ಒಂದು ದಿನ ಮುಂಚಿತವಾಗಿ ಇಂದು ಇಂಟರ್‌ನೆಟ್‌ನಲ್ಲಿ ಪ್ರಕಟವಾದ್ದರಿಂದ ವಿದ್ಯಾರ್ಥಿ ಮತ್ತು ಪೋಷಕ ವೃಂದದವರಲ್ಲಿ ಗೊಂದಲ ಮೂಡಿತು.

ಇಂಟರ್‌ನೆಟ್‌ ಫಲಿತಾಂಶವನ್ನು ಎಟುಕಿಸಿಕೊಳ್ಳಲಾಗದವರು ಪರದಾಡಿದರು. ಇಂಟರ್‌ನೆಟ್‌ ಸೌಲಭ್ಯ ಪಡೆಯಲಾಗದವರು ನಾಳೆಯವರೆಗೆ ಕಾಯಲಾಗದೆ ಪರಿತಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT