ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ಇನ್ನೊಂದು ನೆಲೆ ವಶ: ಹೆದ್ದಾರಿ ನಿರಾತಂಕ

Published 15 ಜೂನ್ 2024, 0:20 IST
Last Updated 15 ಜೂನ್ 2024, 0:20 IST
ಅಕ್ಷರ ಗಾತ್ರ

ಜಿಲ್ಲಾ ಸಹಕಾರಿ ಬ್ಯಾಂಕ್ ದರೋಡೆಗೆ ವಿಫಲ ಯತ್ನ

ಬೆಂಗಳೂರು, ಜೂನ್ 14– ಚಾಮರಾಜಪೇಟೆ ಐದನೇ ಮುಖ್ಯರಸ್ತೆಯಲ್ಲಿರುವ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಭದ್ರತಾ ಕೋಣೆಯ ಗೋಡೆ ಕೊರೆದು ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ಭದ್ರತಾ ಕೋಣೆಯ ಪಕ್ಕದಲ್ಲಿರುವ ಹಳೆಯ ದಾಸ್ತಾನು ಕೋಣೆಯ ಮೂಲಕ ಭದ್ರತಾ ಕೋಣೆಯ ಗೋಡೆ ಕೊರೆಯಲು ಯತ್ನಿಸಲಾಗಿದೆ. ಗೋಡೆ ಕೊರೆಯಲು ಬಳಸಿರುವ ಸಾಧನಗಳನ್ನು ಅಲ್ಲಿಯೇ ಬಿಟ್ಟು ಹೋಗಲಾಗಿದೆ. ಆದರೆ ದುಷ್ಕರ್ಮಿಗಳು ಕಟ್ಟಡದ ಒಳಗೆ ಹೇಗೆ ನುಸುಳಿದರು, ಹೇಗೆ ಹೊರ ಹೋದರು ಎಂಬುದು ಇನ್ನೂ ನಿಗೂಢವಾಗಿದೆ.

ಇನ್ನೊಂದು ನೆಲೆ ವಶ: ಹೆದ್ದಾರಿ ನಿರಾತಂಕ

ನವದೆಹಲಿ, ಜೂನ್ 14– ಪಾಕಿಸ್ತಾನಿ ಅತಿಕ್ರಮಣಕಾರರಿಂದ ಉತ್ತರ ಟೋಲೊಲಿಂಗ್ ಪ್ರದೇಶವನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳುವ ಹೋರಾಟದಲ್ಲಿ ಮೇಜರ್‌ವೊಬ್ಬರು ಸೇರಿದಂತೆ ಹದಿನೇಳು ಮಂದಿ ಭಾರತೀಯ ಯೋಧರು
ಸಾವಿಗೀಡಾಗಿದ್ದಾರೆ.

ಈ ಭೀಕರ ಹೋರಾಟದಲ್ಲಿ ಪಾಕಿಸ್ತಾನದ ಕಡೆ ಹೆಚ್ಚು ಸಾವು–ನೋವುಗಳಾಗಿದ್ದು, ಅವರು ಬಿಟ್ಟು ಹೋಗಿರುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿ
ಕೊಳ್ಳಲಾಗಿದೆ ಎಂದು ಭೂ ಸೇನೆಯ ವಕ್ತಾರ ಕರ್ನಲ್ ವಿಕ್ರಂ ಸಿಂಗ್ ಇಂದು ಪತ್ರಿಕಾ
ಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT