ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ ಈ ದಿನ: ವಿಶ್ವದಾಖಲೆ ಸರಿಗಟ್ಟಿದ ಅನಿಲ್‌ ಕುಂಬ್ಳೆ

Published 8 ಫೆಬ್ರುವರಿ 2024, 2:34 IST
Last Updated 8 ಫೆಬ್ರುವರಿ 2024, 2:34 IST
ಅಕ್ಷರ ಗಾತ್ರ

ನವದೆಹಲಿ, ಫೆ. 7– ಕನ್ನಡ ನಾಡಿನ ಹೆಮ್ಮೆಯ ಕ್ರಿಕೆಟ್‌ ಪಟು ಅನಿಲ್‌ ಕುಂಬ್ಳೆ, ಪಾಕಿಸ್ತಾನದ ನಾಯಕ ವಾಸಿಂ ಅಕ್ರಂ ಅವರ ವಿಕೆಟ್‌ ಪಡೆದು ಪಾಕಿಸ್ತಾನವನ್ನು 212 ರನ್‌ಗಳಿಂದ ಸೋಲಿಸು ತ್ತಿದ್ದಂತೆಯೇ ಮೇಲಕ್ಕೆ ಹಾರಿದಾಗ ಇಡೀ ಆಕಾಶವನ್ನೇ ಬಾಚಿಕೊಳ್ಳುವಂತೆ ತೋರಿತ್ತು. ಕ್ರಿಕೆಟ್‌ ಜಗತ್ತಿನ ಒಂದು ಅಪರೂಪದ, ಅಮೋಘ ಸಾಧನೆಯನ್ನು ಅವರು ಸರಿಗಟ್ಟಿ ದ್ದರು. ಅವರ ಹತ್ತು ವಿಕೆಟ್‌ಗಳ ಸಾಧನೆಗೆ ರಾಷ್ಟ್ರದ ರಾಜಧಾನಿಯಷ್ಟೇ ಅಲ್ಲ ಇಡೀ ಭಾರತವೇ ಹರುಷದಿಂದ ಕುಣಿದು ಕುಪ್ಪಳಿಸಿತ್ತು.

ಜಾವಗಲ್‌ ಶ್ರೀನಾಥ್‌ ಮತ್ತು ವೆಂಕಟೇಶ ಪ್ರಸಾದ್‌ ತಮ್ಮ ಜೊತೆಗಾರ, ಸ್ನೇಹಿತನನ್ನು ಎತ್ತಿಕೊಂಡು ಬಂದಾಗ, ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ಒಂದು ಜೀವವೂ ಕುಳಿತಿರಲಿಲ್ಲ. ಭಾರತ ತಂಡದ ಈ ಸಂಭ್ರಮದಲ್ಲಿ, ದೊಡ್ಡ ಅಂತರದಿಂದಲೇ ಸೋತಿದ್ದ ಪಾಕಿಸ್ತಾನದ ಆಟಗಾರರೂ ಪಾಲ್ಗೊಂಡರು. 122 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ, ಇನಿಂಗ್ಸ್‌ ಒಂದರಲ್ಲಿ ಎಲ್ಲ ಹತ್ತು ವಿಕೆಟ್‌ಗಳನ್ನು ಪಡೆದ ಎರಡನೇ ಬೌಲರ್‌ ಎಂಬ ಹಿರಿಮೆ ಅನಿಲ್‌ ಅವರದ್ದಾಯಿತು. 43 ವರ್ಷಗಳ ಹಿಂದೆ ಈ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದ ಇಂಗ್ಲೆಂಡ್‌ನ ಜಿಮ್‌ ಲೇಕರ್‌ ಇಂದು ಅನಿಲ್‌ ಅವರ ಅಪ್ರತಿಮ ಸಾಧನೆ ನೋಡಲು ಬದುಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT