ಬಹುಮತ ಪುರಾವೆ: ವಾಜಪೇಯಿಗೆ ರಾಷ್ಟ್ರಪತಿ ಸೂಚನೆ
ನವದೆಹಲಿ, ಮಾರ್ಚ್ 10– ಹನ್ನೆರಡನೇ ಲೋಕಸಭೆಯ ಅಧಿಸೂಚನೆ ಪ್ರಕಟಗೊಂಡ ತಕ್ಷಣವೇ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರು ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಬಹುಮತವಿದೆ ಎಂಬುದನ್ನು ಸಾಬೀತುಪಡಿಸುವ ದಾಖಲೆ ಒದಗಿಸುವಂತೆ ಇಂದು ರಾತ್ರಿ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸೂಚಿಸಿದ್ದಾರೆ.
ರಾಷ್ಟ್ರಪತಿಯವರ ಜತೆ ಸುಮಾರು 35 ನಿಮಿಷ ಮಾತುಕತೆ ನಡೆಸಿ ಹೊರಬಂದ ವಾಜಪೇಯಿ, ಬಹುಮತವಿದೆ ಎಂಬುದನ್ನು ಸಾಬೀತುಪಡಿಸಲು ಅಗತ್ಯವಿರುವ ದಾಖಲೆಯನ್ನು ನಾಳೆ ಸಲ್ಲಿಸುವುದಾಗಿ ಅವರಿಗೆ ತಿಳಿಸಿದರಲ್ಲದೆ, ತಾವು ಸ್ಥಿರ ಹಾಗೂ ಸುಭದ್ರ ಸರ್ಕಾರ ಸ್ಥಾಪಿಸುವುದಾಗಿ ತಿಳಿಸಿದರು.
ಸೋನಿಯಾ ಬೆಂಬಲಿಗರಿಗೆ ಕೇಸರಿ ಸವಾಲು
ನವದೆಹಲಿ, ಮಾರ್ಚ್ 10– ಕಾಂಗ್ರೆಸ್ ಅಧ್ಯಕ್ಷತೆಯನ್ನು ಸೋನಿಯಾ ಗಾಂಧಿ ಅವರಿಗೆ ಬಿಟ್ಟುಕೊಡಲು ಅಧ್ಯಕ್ಷ ಸ್ಥಾನವನ್ನು ತ್ಯಾಗ ಮಾಡಲು ಮುಂದಾಗಿರುವ ಸೀತಾರಾಂ ಕೇಸರಿ ಅವರ ತೀರ್ಮಾನ ಈಗ ಪಕ್ಷಕ್ಕೆ ಬಿಡಿಸಲಾಗದ ಕಗ್ಗಂಟಾಗಿದೆ.
ಕಳೆದ ಚುನಾವಣೆಯಲ್ಲಿ ಪಕ್ಷದ ಪರವಾಗಿ ದೇಶದಾದ್ಯಂತ ಸುತ್ತಿ ಪ್ರಚಾರ ಮಾಡಿದ ಸೋನಿಯಾ ಅವರು ಪಕ್ಷದ ನಾಯಕತ್ವದ ಚುಕ್ಕಾಣಿ ಹಿಡಿಯಲೇಂಬುದು ಅನೇಕರ ಆಸೆ. ಆದರೆ ಸೋನಿಯಾ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಸ್ವೀಕಾರ ಮಾಡಲು ಈಗ ಸಿದ್ಧರಿದ್ದಾರೆಯೇ ಎನ್ನುವುದು ಈಗ ಪಕ್ಷದ ನಾಯಕರನ್ನು ಕಾಡುತ್ತಿರುವ ಪ್ರಶ್ನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.