ಸರ್ಕಾರ ರಚನೆ: ರಾಷ್ಟ್ರಪತಿ ಆಹ್ವಾನಕ್ಕೆ ಬಿಜೆಪಿ ನಿರೀಕ್ಷೆ
ನವದೆಹಲಿ, ಮಾರ್ಚ್ 6 (ಯುಎನ್ಐ, ಪಿಟಿಐ)– ‘ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ತಾನಾಗಿಯೇ ಸರ್ಕಾರ ರಚನೆ ಪ್ರಸ್ತಾವ ಮಂಡಿಸುವುದಿಲ್ಲ. ಬದಲಾಗಿ 12ನೇ ಲೋಕಸಭೆಯಲ್ಲಿ ಅತ್ಯಧಿಕ ಸ್ಥಾನ ಗಳಿಸಿರುವ ಆಧಾರದ ಮೇಲೆ ರಾಷ್ಟ್ರಪತಿಗಳ ಆಹ್ವಾನವನ್ನು ನಿರೀಕ್ಷೆ ಮಾಡಲಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.