ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 5-4-1996

Last Updated 4 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಚುನಾವಣೆ: ಪಕ್ಷ ಮಾಡುವ ವೆಚ್ಚ ಅಭ್ಯರ್ಥಿಯ ಲೆಕ್ಕಕ್ಕೆ
ನವದೆಹಲಿ, ಏ. 4–
ರಾಜಕೀಯ ಪಕ್ಷವೊಂದು ಚುನಾವಣೆಗೆ ಮಾಡುವ ವೆಚ್ಚ ಅಭ್ಯರ್ಥಿಯ ಲೆಕ್ಕಕ್ಕೆ ಸೇರುತ್ತದೆ. ಆದರೆ, ತನ್ನ ಗಮನಕ್ಕೆ ತರದೆ ಪಕ್ಷ ಈ ವೆಚ್ಚ ಮಾಡಿದೆ ಎಂದು ಅಭ್ಯರ್ಥಿ ಸಾಬೀತುಪಡಿಸಿದರೆ ಮಾತ್ರ ಆತನ ಲೆಕ್ಕಕ್ಕೆ ಸೇರಿಸದೆ ವಿನಾಯಿತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಇಂದು ವ್ಯಾಪಕ ಪರಿಣಾಮ ಬೀರುವ ಮಹತ್ವದ ತೀರ್ಪಿನಲ್ಲಿ ತಿಳಿಸಿದೆ.

ಅಭ್ಯರ್ಥಿಗಳ ಮೇಲೆ ಪಕ್ಷ ಮಾಡುವ ವೆಚ್ಚವನ್ನು ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸದೆ ವಿನಾಯಿತಿ ನೀಡುವ ಚುನಾವಣಾ ಕಾನೂನಿನ ಸೌಲಭ್ಯ ಬಳಸಿಕೊಳ್ಳಲು ಲೆಕ್ಕ ಪತ್ರಗಳನ್ನಿಡದ ಹಾಗೂ ಆದಾಯದ ಲೆಕ್ಕ ಇಡದ ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಲಾಗದು ಎಂದು ಕೋರ್ಟ್ಅಭಿಪ್ರಾಯಪಟ್ಟಿದೆ.

ಬರಲಿರುವ ಚುನಾವಣೆಗಳಲ್ಲಿ ಕಪ್ಪುಹಣದ ಬಳಕೆಗೆ ಅಂತ್ಯ ಹಾಡುವುದು ಕೋರ್ಟ್ ಕ್ರಮದ ಉದ್ದೇಶ.‌

ರಸ್ತೆ ತಡೆ, ಬೀದರ್ ಉದ್ರಿಕ್ತ
ಬೀದರ್, ಏ. 4–
ಕಲ್ಬುರ್ಗಿ ವಿಶ್ವವಿದ್ಯಾ ಲಯಕ್ಕೆ ಬಸವೇಶ್ವರ ಅವರ ಹೆಸರಿಡಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಇಂದು ಜಿಲ್ಲೆಯ ಹಲವು ಕಡೆಗಳಲ್ಲಿ ನಡೆಸಿದ ರಸ್ತಾರೋಕೊ ಕಾಲಕ್ಕೆ ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು, ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿರುವು ದಾಗಿ ಇಲ್ಲಿಗೆ ಬಂದಿರುವ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT