ನವದೆಹಲಿ, ಜ. 24– ಭಾರತದಲ್ಲಿ ಅಣ್ವಸ್ತ್ರಗಳ ತಯಾರಿಕೆ ಸಾಧ್ಯತೆಯೂ ಸೇರಿ ಅಣುಶಕ್ತಿ ಅಭಿವೃದ್ಧಿಗೆ ಸಂಬಂಧಪಟ್ಟ ಎಲ್ಲ ಅಂಶಗಳ ಆಮೂಲಾಗ್ರ ಚರ್ಚೆಗಾಗಿ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ದಿನಗಳಲ್ಲಿ ಅಣುಶಕ್ತಿ ಕುರಿತ ಸಂಸತ್ ಸಮಾಲೋಚಕ ಸಮಿತಿ ಒಂದೆರಡು ಸಭೆ ಸೇರುವ ನಿರೀಕ್ಷೆ ಇದೆ.

ಲಾಟರಿ: ಇಂದು ಅದೃಷ್ಟ ಪರೀಕ್ಷೆ
ಬೆಂಗಳೂರು, ಜ. 24– ನಾಳೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ರಾಜ್ಯದ ಪ್ರಥಮ ಲಾಟರಿಯ ‘ಡ್ರಾ’ ಫಲಿತಾಂಶಕ್ಕಾಗಿ ಲಕ್ಷಾಂತರ ಮಂದಿ ಆಸೆ–ಆಸಕ್ತಿಗಳಿಂದ ಕಾಯುತ್ತಿದ್ದಾರೆ.

ಫಲಿತಾಂಶವನ್ನು ಆದಷ್ಟು ಶೀಘ್ರವಾಗಿ ತಿಳಿದುಕೊಳ್ಳುವ ಉದ್ದೇಶದಿಂದ ನಗರಕ್ಕೆ ಸಮೀಪದ ಊರುಗಳಿಂದ ಟಿಕೆಟ್ ಕೊಂಡವರು ನಗರಕ್ಕೆ ಆಗಮಿಸಿದ್ದಾರೆ.

‘ಪ್ರಥಮ ಬಹುಮಾನ ಬಂದರೆ...’ ಎಂಬ ಆಶಾಭಾವನೆಯ ಮೇಲೆ ಬಹುಮಾನದ ಹಣವನ್ನು ವಿನಿಯೋಗಿಸುವ ಬಗ್ಗೆ ಮನಸ್ಸಿನಲ್ಲಿ ಗುಡಿಗೋಪುರಗಳನ್ನು ಕಟ್ಟುವ ಕಾರ್ಯ ನಿರಂತರವಾಗಿ ಸಾಗಿದೆ. ದೇವರ ಮೇಲಿನ ಹರಕೆಗಳ ಹೊರೆ ಹೆಚ್ಚಿದೆ.

ಅನೇಕ ಮಂದಿ, ಮಾಡಬೇಕಾಗಿದ್ದ ಕೆಲಸವನ್ನು ‘25ನೇ ತಾರೀಖು ನೋಡಿ’ ಮಾಡಲು ಮುಂದಕ್ಕೆ ಹಾಕಿದ್ದಾರೆ.

‘ಡ್ರಾ’ ದಿನ ಸನ್ನಿಹಿತವಾದಂತೆಲ್ಲ ಬೀದಿಗಳಲ್ಲಿ, ಮನೆಗಳಲ್ಲಿ, ಹೋಟೆಲುಗಳಲ್ಲಿ, ಕಚೇರಿಗಳಲ್ಲಿ ಎಲ್ಲೆಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಲಾಟರಿ ಕುರಿತೇ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.