ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ 25–09–1971

Last Updated 24 ಸೆಪ್ಟೆಂಬರ್ 2021, 20:55 IST
ಅಕ್ಷರ ಗಾತ್ರ

ಇಂಫಾಲ್‌ನಲ್ಲಿ ಉದ್ರಿಕ್ತ ವಿದ್ಯಾರ್ಥಿಗಳ ಮೇಲೆ ಗುಂಡು, ಸೈನ್ಯಕ್ಕೆ ಕರೆ
ಇಂಫಾಲ್, ಸೆ. 24–
ಇಲ್ಲಿನ ವಿದ್ಯಾರ್ಥಿಗಳು ಕಳೆದ ಎರಡು ದಿನಗಳಿಂದ ನಡೆಸಿರುವ ಆಹಾರ ಚಳವಳಿ ಇಂದು ಹಿಂಸಾತ್ಮಕ ರೂಪ ತಾಳಿ ಗೋಲಿಬಾರ್ ಮತ್ತು ಕರ್ಫ್ಯೂ ಜಾರಿಗೆಡೆ ಮಾಡಿಕೊಟ್ಟಿತು. ಮುಂಜಾಗ್ರತಾ ಕ್ರಮವಾಗಿ ಇಂಫಾಲ್ ನಗರಕ್ಕೆ ಸೈನ್ಯ ಕರೆಸಲಾಗಿದೆ.

ವಾರಕ್ಕೆ ಆರು ಕೆ.ಜಿ. ಭತ್ತವನ್ನು ಪಡಿತರವಾಗಿ ನೀಡಲು ಹಾಗೂ ನಿನ್ನೆ ಬಂಧಿಸಲಾದ ಎಲ್ಲಾ ವಿದ್ಯಾರ್ಥಿಗಳ ಬಿಡುಗಡೆಗೆ ಆಗ್ರಹಿಸಿ ಚಳವಳಿ ನಡೆಯುತ್ತಿತ್ತು.

ಈ ಭಾರಿ ಗುಂಪಿನ ಮೇಲೆ ಇಂದು ಪೊಲೀಸರು ಗುಂಡು ಹಾರಿಸಿದಾಗ ಐವರು ಗಾಯಗೊಂಡರು.

ಮೈಸೂರು ಭೂ ಸುಧಾರಣೆಶಾಸನಕ್ಕೆ ತಿದ್ದುಪಡಿ
ನವದೆಹಲಿ, ಸೆ. 24–
ಭೂಸುಧಾರಣೆ ಜಾರಿಗೆ ತರುವಲ್ಲಿನ ವಿಳಂಬ ತಗ್ಗಿಸಲು ಮೈಸೂರು ಸರ್ಕಾರ ಮೈಸೂರು ಭೂಸುಧಾರಣಾ ಶಾಸನಕ್ಕೆ ತಿದ್ದುಪಡಿ ಸೂಚಿಸುವ ಕರಡು ಮಸೂದೆಯನ್ನು ಸಿದ್ಧಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT