ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಗುರುವಾರ 26–2–1970

Last Updated 25 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ರಾಜ್ಯ ಸಂಪುಟ ಉರುಳಿಸುವ ಯತ್ನ: ಎಸ್ಸೆನ್‌ ಶಂಕೆ

ಬೆಂಗಳೂರು, ಫೆ. 25– ಮೈಸೂರು– ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿಯ ಸಲಹೆಯು ‘ರಾಜ್ಯದ ಮಂತ್ರಿಮಂಡಲವನ್ನು ಉರುಳಿಸುವ ಪ್ರಯತ್ನವಿರಬಹುದು’ ಎಂದು ಸಂಸ್ಥಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌. ನಿಜಲಿಂಗಪ್ಪ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

‘ಮಹಾಜನ್‌ ಆಯೋಗದ ಶಿಫಾರಸಿನ ವಿರುದ್ಧ ಹೋಗುವುದು ಬಹಳ ತಪ್ಪು. ಆಯೋಗದ ರಚನೆಗೆ ಪ್ರಧಾನಿ ಬದ್ಧರಾದವರು’ ಎಂದು ಸ್ಪಷ್ಟಪಡಿಸಿ ಈ ಪ್ರಯತ್ನವನ್ನು ‘ರಾಜಕೀಯ’ ಎಂದು ಟೀಕಿಸಿದರು.

ರೈಲ್ವೆ ಪ್ರಯಾಣ ದರ ಏರಿಕೆಯಲ್ಲಿ ಸೂಕ್ತ ತಿದ್ದುಪಡಿ ಸಂಭವ

ನವದೆಹಲಿ, ಫೆ. 25– ರೈಲ್ವೆ ಆಯವ್ಯಯದಲ್ಲಿನ ಸಲಹೆಗಳನ್ನು ಅದರಲ್ಲೂ ಮುಖ್ಯವಾಗಿ ಮೂರನೇ ದರ್ಜೆ ಪ್ರಯಾಣ ದರದಲ್ಲಿ ತೀವ್ರ ಏರಿಕೆ ಮಾಡುವ ಸಲಹೆಯನ್ನು ಎಲ್ಲ ವಿರೋಧ ಪಕ್ಷಗಳು ವಿರೋಧಿಸುವುದರ ಕಾರಣ ರೈಲ್ವೆ ಆಯವ್ಯಯದಲ್ಲಿ ಸೂಚಿಸಿರುವ ಸಲಹೆಗಳನ್ನು ಗಣನೀಯ ಪ್ರಮಾಣದಲ್ಲಿ ಕೇಂದ್ರವು ತಿದ್ದುಪಡಿ ಮಾಡದೆ ವಿಧಿಯಿಲ್ಲವಾಗಿದೆ.

ರಾಜಿ ಸೂತ್ರವನ್ನು ಕಂಡುಕೊಳ್ಳುವ ಬಗ್ಗೆ ರೈಲ್ವೆ ಮಂತ್ರಿ ಜಿ.ಎಲ್‌. ನಂದಾ ಅವರು ಶುಕ್ರವಾರ ವಿರೋಧ ಪಕ್ಷಗಳ ನಾಯಕರ ಜತೆ ಮಾತುಕತೆ ನಡೆಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT