ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ | ಸರ್ಕಾರದ ಜೊತೆ ಪೂರ್ಣ ಅಸಹಕಾರ: ಚಳವಳಿಗೆ ಸಿಪಿಐ ವಿರೋಧ

Published 1 ಜುಲೈ 2024, 19:05 IST
Last Updated 1 ಜುಲೈ 2024, 19:05 IST
ಅಕ್ಷರ ಗಾತ್ರ

ಸರ್ಕಾರದ ಜೊತೆ ಪೂರ್ಣ ಅಸಹಕಾರ: ಸೋಷಲಿಸ್ಟರ ಚಳವಳಿಗೆ ಸಿಪಿಐ ವಿರೋಧ

ನವದೆಹಲಿ, ಜುಲೈ 1– ಸೋಷಲಿಸ್ಟ್ ಪಕ್ಷವು ಸೂಚಿಸಿರುವ ‘ಸರ್ಕಾರದ ಜೊತೆ ಸಂಪೂರ್ಣ ಅಸಹಕಾರ’ ಚಳವಳಿಯನ್ನು ಭಾರತದ ಕಮ್ಯುನಿಸ್ಟ್ ಪಕ್ಷವು ವಿರೋಧಿಸುವುದೆಂದು ಸಿ.ಪಿ.ಐ.ನ ಪ್ರಧಾನ ಕಾರ್‍ಯದರ್ಶಿ ರಾಜೇಶ್ವರರಾವ್ ಅವರು ಇಂದು ಇಲ್ಲಿ ತಿಳಿಸಿದರು.

ಸೋಷಲಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸುರೇಂದ್ರಮೋಹನ್ ಅವರ ಹೇಳಿಕೆಗೆ ಪ್ರತಿ ಹೇಳಿಕೆಯೊಂದನ್ನು ನೀಡಿ ರಾಜೇಶ್ವರ ರಾಯರು ಸಿ.ಪಿ.ಐ. ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಗತಿಪರ ಕಾಂಗ್ರೆಸ್ಸಿಗರ ಜೊತೆ ಮೈತ್ರಿಯುತ ಬಾಂಧವ್ಯ ಅಂತೆಯೇ ಸರ್ಕಾರದ ಜನತಾ ವಿರೋಧಿ ನೀತಿಗಳ ವಿರುದ್ಧ ಹೋರಾಟ ಕುರಿತ ಸಿ.ಪಿ.ಐ. ಧೋರಣೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ರಾಷ್ಟ್ರದಲ್ಲಿ ನೈತಿಕ ಪುನರುತ್ಥಾನವೇ ತಮ್ಮ ಚಳವಳಿ ಗುರಿ ಎಂದು ಜೆ.ಪಿ.

ರಾಂಚಿ, ಜುಲೈ 1– ಗುಜರಾತಿನಲ್ಲಿ ಮಾಡಿದಂಥ ತಪ್ಪನ್ನೇ ಮತ್ತೆ ಮಾಡಬೇಡಿ ಎಂದು ಬಿಹಾರ ರಾಜ್ಯದ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಕರೆ ನೀಡಿದ್ದಾರೆ.

ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಸಂಘರ್ಷ ಸಮಿತಿಗಳನ್ನು ವ್ಯವಸ್ಥೆಗೊಳಿಸಲು ಗ್ರಾಮಗಳಿಗೆ ಹೋಗುವಂತೆಯೂ ಅವರು ಹೇಳಿದ್ದಾರೆ.

ನಿನ್ನೆ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ‘ನಿಜವಾದ ಉತ್ತಮ ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪಿಸಲು ಮುಂದಿನ ಚುನಾವಣೆಗೆ ಸರಿಯಾದ ಜನರನ್ನು ಆಯ್ಕೆ ಮಾಡಲು ಅನುವಾಗುವಂತೆ ಸೂಕ್ತ ಅಡಿಪಾಯ ಹಾಕಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT