ಶುಕ್ರವಾರ, ಮೇ 20, 2022
23 °C

50 ವರ್ಷಗಳ ಹಿಂದೆ: ಸೋಮವಾರ, 15 ಫೆ.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪುಂಡತನದಿಂದ ಪ್ರತ್ಯೇಕ ರಾಜ್ಯದ ಗುರಿ ಈಡೇರದು’
ಹೈದರಾಬಾದ್, ಫೆ. 14–
ಪುಂಡಾಟಿಕೆ ಯಿಂದ ಪ್ರತ್ಯೇಕ ರಾಜ್ಯದ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು, ಪಾದರಕ್ಷೆ ಮತ್ತು ಕಲ್ಲುಗಳನ್ನು ಎಸೆಯುವುದರಲ್ಲಿ ನಿರತರಾಗಿದ್ದ ಉದ್ರಿಕ್ತಪೂರ್ಣ ತೆಲಂಗಾಣ ಪ್ರದರ್ಶನಕಾರರಿಗೆ ಇಂದು ಎಚ್ಚರಿಕೆ ನೀಡಿದರು.

ಸಮಾಜವಾದ ಮತ್ತು ಬಲಪಂಥೀಯ ಪ್ರತಿಗಾಮಿಗಳ ನಡುವಣ ಹೋರಾಟವೇ ಈ ಮಧ್ಯಂತರ ಚುನಾವಣೆಯಾದ್ದರಿಂದ, ಪ್ರತ್ಯೇಕ ರಾಜ್ಯದ ಬಗ್ಗೆ ಜನಗಳ ಮನಸ್ಸನ್ನು ಕೆರಳಿಸಿ ಮೂಲಭೂತ ರಾಷ್ಟ್ರೀಯ ಸಮಸ್ಯೆಗಳ ಮೇಲೆ ತೆರೆ ಎಳೆಯಬಾರದೆಂದೂ ಅವರು ಮನವಿ ಮಾಡಿಕೊಂಡರು.

ಭಾರತದ ವಿರುದ್ಧ ಭದ್ರತಾ ಮಂಡಳಿಗೆ ಪಾಕ್ ದೂರು
ನವದೆಹಲಿ, ಫೆ. 14–
ಪಾಕಿಸ್ತಾನದ ಮಿಲಿಟರಿ ಮತ್ತು ಸಿವಿಲ್ ವಿಮಾನಗಳು ಭಾರತದ ಪ್ರದೇಶದ ಮೇಲೆ ಯಾನ ಮಾಡುವುದನ್ನು ಭಾರತ ಸರ್ಕಾರ ನಿಷೇಧಿಸಿರುವ ಬಗ್ಗೆ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ದೂರು ಕೊಟ್ಟಿದೆ.

ಈ ನಿಷೇಧ ಕ್ರಮದಿಂದ ಭಾರತವು ಅಂತರರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದೆಯೆಂದು ಪಾಕಿಸ್ತಾನ ದೂರು ಪತ್ರದಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು