ಭಾನುವಾರ, ಮೇ 16, 2021
22 °C

50 ವರ್ಷಗಳ ಹಿಂದೆ: ಮಂಗಳವಾರ 13.4.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸ್ಥಾ ಕಾಂಗ್ರೆಸ್ ಪಕ್ಷದ ಸರ್ಕಾರ ಅಸಂಭವ

ಬೆಂಗಳೂರು, ಏ. 12– ಸ್ವಶಕ್ತಿಯ ಮೇಲೆ ಮತ್ತೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ಸಂಸ್ಥಾ ಕಾಂಗ್ರೆಸ್ ಪಕ್ಷ ಈ ಪ್ರಯತ್ನವನ್ನು ಕೈಬಿಡುವ ಸಂಭವ ಹೆಚ್ಚಾಗಿದೆ.

ಅಲ್ಪಸಂಖ್ಯಾತ ಸರ್ಕಾರ ರಚಿಸುವ ತಂಡದ ನಿರ್ಧಾರ ಹಾಗೂ ತಮ್ಮ ಪಕ್ಷದ ಅಂದಾಜು ಆಲೋಚನೆಗಳಿಗೆ ಸಾಮರಸ್ಯ ಉಂಟಾಗದಿರುವ ಪರಿಸ್ಥಿತಿಯನ್ನು ವಿಮರ್ಶಿಸಿ ಪಕ್ಷದ ನಾಯಕ ಶ್ರೀ ವೀರೇಂದ್ರ ಪಾಟೀಲ್ ಅವರು ರಾತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ.

ತಾವು ಮಂತ್ರಿಮಂಡಲವನ್ನು ರಚಿಸು ವುದಿಲ್ಲವೆಂದು ಶ್ರೀ ಪಾಟೀಲರು ನಾಳೆ ತಿಳಿಸಿದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಲಿದ್ದಾರೆ.

ಜನಸಂಖ್ಯೆ 54 ಕೋಟಿ

ನವದೆಹಲಿ, ಏ. 12– ಈ ವರ್ಷದ ಜನಗಣತಿ ಪ್ರಕಾರ, ಭಾರತದ ಜನಸಂಖ್ಯೆ ಐವತ್ನಾಲ್ಕು ಕೋಟಿ ಎಪ್ಪತ್ತು ಲಕ್ಷ.

1971ರ ಜನಗಣತಿ ಪ್ರಕಾರ, ರಾಷ್ಟ್ರದಲ್ಲಿ ಉತ್ತರ ಪ್ರದೇಶವು ಅತ್ಯಂತ ಹೆಚ್ಚು ಜನಭರಿತ ರಾಜ್ಯವಾಗಿದ್ದು, ಅದರ ಜನಸಂಖ್ಯೆ 8,82,99,453.

ಹೆಚ್ಚು ಜನಸಂಖ್ಯೆ ಪಡೆದಿರುವ ಇತರ ರಾಜ್ಯಗಳ ಪೈಕಿ ಮೈಸೂರು ರಾಜ್ಯವು 8ನೇ ಸ್ಥಾನ ಪಡೆದಿದ್ದು, ಅದರ ಜನಸಂಖ್ಯೆ 2,92,24,046.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು