ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 29.6.1971

Last Updated 28 ಜೂನ್ 2021, 19:03 IST
ಅಕ್ಷರ ಗಾತ್ರ

ಪಾಕಿಸ್ತಾನದ ಮೇಲೆ ಯುದ್ಧ ಹೂಡುವ ಮಾತು ಬೇಡ: ‘ತಾಳ್ಮೆ’ಗೆ ಇಂದಿರಾ ಮನವಿ
ನವದೆಹಲಿ, ಜೂನ್ 28–
ಬಾಂಗ್ಲಾ ದೇಶದ ವಿಷಯ ಪ್ರಸ್ತಾಪ ಮಾಡುವಾಗ, ಪಾಕಿಸ್ತಾನದ ಮೇಲೆ ಯುದ್ಧ ಹೂಡ ಬೇಕೆಂಬ ಯಾವ ಸಲಹೆಯೂ ಸರಿಯಲ್ಲವೆಂದು ಇಂದು ಬೆಳಿಗ್ಗೆ ಸುಮಾರು ಒಂದು ಗಂಟೆ ಕಾಲ ಭೇಟಿ ಮಾಡಿ ಚರ್ಚೆ ನಡೆಸಿದ ಲೋಕಸಭೆ ವಿರೋಧ ಪಕ್ಷಗಳ ನಾಯಕರಿಗೆ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಸೂಚಿಸಿದುದಾಗಿ ತಿಳಿದುಬಂದಿದೆ.

ಅಂಥ ಸಲಹೆಗಳಿಂದ ಪಾಕಿಸ್ತಾನಕ್ಕೆ ಅನುಕೂಲವಾಗುತ್ತದೆ; ಏಕೆಂದರೆ ಅದರ ಮಿತ್ರ ರಾಷ್ಟ್ರಗಳು ಪಾಕಿಸ್ತಾನಕ್ಕೆ ಹೆಚ್ಚುಹೆಚ್ಚು ನೆರವು ನೀಡಲು ಅಂಥ ಮಾತುಗಳಿಂದಪ್ರೇರಿತರಾಗುತ್ತಾರೆ ಎಂದು ಶ್ರೀಮತಿ ಗಾಂಧಿ ವಿವರಿಸಿದರು.

ರಾಜ್ಯದಲ್ಲಿ ತಯಾರಾಗುವ ಚಲನಚಿತ್ರಗಳಿಗೆಲ್ಲ ಸಬ್ಸಿಡಿಗೆ ಒತ್ತಾಯ
ಬೆಂಗಳೂರು, ಜೂನ್ 28–
ರಾಜ್ಯದಲ್ಲಿ ತಯಾರಾಗುವ ಎಲ್ಲ ಚಲನಚಿತ್ರಗಳಿಗೂ ತಲಾ 50 ಸಾವಿರ ರೂಪಾಯಿ ಸಹಾಯಧನ ನೀಡಬೇಕೆಂದು ಇಂದು ನಗರ ಭವನದಲ್ಲಿ ನಡೆದ ಚಲನಚಿತ್ರೋದ್ಯಮದ ಎಲ್ಲ ಕ್ಷೇತ್ರಗಳ ಪ್ರತಿನಿಧಿ ಗಳು ಹಾಗೂ ಅಭಿಮಾನಿಗಳ ಸಭೆ ಸರ್ಕಾರವನ್ನು ಒತ್ತಾಯಪಡಿಸಿತು.

ರಾಜ್ಯದಲ್ಲಿ ಫಿಲ್ಮ್ ಚೇಂಬರ್ ಹಾಗೂ ಚಿತ್ರ ನಿರ್ಮಾಪಕರ ಗಿಲ್ಡ್ ಆಶ್ರಯದಲ್ಲಿ ನಡೆದ ಸಂಘಟನಾ ಸಭೆಯ ಅಧ್ಯಕ್ಷತೆಯನ್ನು ಪ್ರಸಿದ್ಧ ನಟ ಶ್ರೀ ರಾಜ್‌ಕುಮಾರ್ ಅವರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT