ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ, 24–08–1972

Last Updated 23 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ರೈತರು ಮತ್ತು ವರ್ತಕರ ಘೋಷಿತ ದಾಸ್ತಾನಿನ ಅರ್ಧಭಾಗ ಸರ್ಕಾರದ ವಶಕ್ಕೆ

ಬೆಂಗಳೂರು, ಆಗಸ್ಟ್‌ 23– ವರ್ತಕರು ಹಾಗೂ ರೈತರ ಬಳಿಯಿರುವ ಘೋಷಿತ ದಾಸ್ತಾನಿನಲ್ಲಿ ಶೇ 50ರಷ್ಟನ್ನು ಸ್ವಾಧೀನಪಡಿಸಿಕೊಳ್ಳಲು ಆರಂಭಿಸಿರುವ ಸರ್ಕಾರ ಇಂದು ಆ ಧಾನ್ಯಕ್ಕೆ ಬೆಲೆ ನಿಗದಿ ಮಾಡಿತು.

ಇಂದು ನಡೆದ ಮಂತ್ರಿಮಂಡಲದ ತೀರ್ಮಾನದ ಪ್ರಕಾರ, ಹಾಗೆ ಸ್ವಾಧೀನಕ್ಕೆ ತೆಗೆದುಕೊಳ್ಳುವ ಅಕ್ಕಿ ಹಾಗೂ ಜೋಳಕ್ಕೆ ಆಹಾರ ಕಾರ್ಪೊರೇಷನ್‌ ನೀಡುವ ಬೆಲೆಯನ್ನು ಕೊಡಲಾಗುವುದು.

ಆಗಸ್ಟ್‌ 1ರಿಂದ ಈ ರೀತಿ ದಾಸ್ತಾನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಆರಂಭಿಸಲಾಗಿದೆ.

ಮಾರುಕಟ್ಟೆಯಲ್ಲಿ ಬೆಲೆ ಏರದಂತೆ ಮಾಡುವುದೇ ಸರ್ಕಾರದ ಈ ಕ್ರಮದ ಉದ್ದೇಶ.

ವಾಪಸಾದ ಬಳಿಕ ಶರಾವತಿ ವಿಚಾರಣೆ ಕುರಿತು ನಿರ್ಧಾರ

ಬೆಂಗಳೂರು, ಆಗಸ್ಟ್‌ 23– ಮುಖ್ಯ
ಮಂತ್ರಿಗಳ ದೆಹಲಿ ಭೇಟಿಯ ನಂತರ ಶರಾವತಿ ಯೋಜನೆ ಕುರಿತು ವಿಚಾರಣೆ ನಡೆಸುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.‌

ಶರಾವತಿ ವಿದ್ಯುಜ್ಜನಕ ಯಂತ್ರಗಳಿಗೆ ಉಂಟಾಗಿರುವ ನಷ್ಟವನ್ನು ಪರಿಶೀಲಿಸಿ
ನಿನ್ನೆ ನಗರಕ್ಕೆ ಹಿಂದುರುಗಿದ ಮುಖ್ಯಮಂತ್ರಿ ಗಳು, ಸಂಜೆ ದೆಹಲಿಗೆ ತೆರಳಿದ್ದು, 26
ಅಥವಾ 27ಕ್ಕೆ ನಗರಕ್ಕೆ ಹಿಂದಿರುಗುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT