ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಬಿಹಾರ: ರೈಲುಗಳ ಮೇಲೆ ದಾಳಿ, ಬೆಂಕಿ

Published 20 ಮಾರ್ಚ್ 2024, 23:35 IST
Last Updated 20 ಮಾರ್ಚ್ 2024, 23:35 IST
ಅಕ್ಷರ ಗಾತ್ರ

ಬಿಹಾರ: ರೈಲುಗಳ ಮೇಲೆ ದಾಳಿ, ಬೆಂಕಿ; ಗುಂಡೇಟಿನಿಂದ ನಾಲ್ವರ ಸಾವು

ಪಟನಾ, ಮಾರ್ಚ್‌ 20– ಬಿಹಾರದ ರಾಜಧಾನಿಯಲ್ಲಿ ತ್ವರಿತವಾಗಿ ಶಾಂತಿಯುಂಟಾಗುತ್ತದೆಂದು ಕಂಡುಬಂದಾಗ್ಯೂ ರಾಜ್ಯದ ನಾನಾ ಭಾಗಗಳಲ್ಲಿ ರೈಲು ಹಾಗೂ ಸರ್ಕಾರಿ ಕಚೇರಿಗಳ ಮೇಲೆ ದಾಳಿ, ಅಗ್ನಿಸ್ಪರ್ಶ ಹಾಗೂ ಲೂಟಿ ಪ್ರಕರಣಗಳು ನಡೆದುದು ವರದಿಯಾಗಿದೆ. ಮುಂಘೇರ್‌ ಜಿಲ್ಲೆಯ ಲಖಿಸರಾಯ್‌

ಹಾಗೂ ಸೀತಾನುರ್ಹಿ ಜಿಲ್ಲೆಯ ಬೈರ್ಗಾನಿಯದಲ್ಲಿ ಪೊಲೀಸರ ಗುಂಡಿನಿಂದ 4 ಮಂದಿ ಸತ್ತು, ಇತರ 6 ಮಂದಿ ಗಾಯಗೊಂಡಿದ್ದಾರೆ.

ರೈಲು ನಿಲ್ದಾಣಗಳು, ಗೂಡ್ಸ್‌ಶೆಡ್‌ಗಳ ಮೇಲೆ ಉದ್ರಿಕ್ತ ಗುಂಪುಗಳು ಮುಖ್ಯವಾಗಿ ದಾಳಿಯಿಟ್ಟವು. ಅನೇಕ ಕಡೆ ಅವುಗಳಿಗೆ ಬೆಂಕಿ ಹಚ್ಚಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT