ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷದ ಹಿಂದೆ | ಫಕ್ರುದ್ದೀನ್ ಅಲೀ ಅಹ್ಮದ್‌ ಭಾರತದ ನೂತನ ರಾಷ್ಟ್ರಪತಿ

Published 21 ಆಗಸ್ಟ್ 2024, 0:12 IST
Last Updated 21 ಆಗಸ್ಟ್ 2024, 0:12 IST
ಅಕ್ಷರ ಗಾತ್ರ
ರಸ್ತೆ, ಅನವಶ್ಯ ಕಟ್ಟಡಗಳಿಗಾಗಿ ಸಿಮೆಂಟ್ ಬಳಕೆ ಪೂರ್ಣ ನಿಷಿದ್ಧ

ನವದೆಹಲಿ, ಆ. 20– ರಸ್ತೆಗಳು ಹಾಗೂ ಖಾಸಗಿ ಮತ್ತು ಸರ್ಕಾರಿ ಉದ್ಯಮ
ರಂಗಗಳೆರಡರಲ್ಲೂ ಅನವಶ್ಯಕ ಕಟ್ಟಡಗಳ ನಿರ್ಮಾಣಕ್ಕಾಗಿ ಸಿಮೆಂಟ್ ಬಳಸುವುದರ ಮೇಲೆ ಸರ್ಕಾರ ಇಂದು ಒಂದು ವರ್ಷ ಕಾಲ ಸಂಪೂರ್ಣ ನಿಷೇಧ ವಿಧಿಸಿತು.

ಈ ನಿಷೇಧಾಜ್ಞೆಯು ಮನೆಗಳ ನಿರ್ಮಾಣಕ್ಕೆ ಅನ್ವಯಿಸುವುದಿಲ್ಲ. ಆದರೆ ನಿರ್ಮಾಣಕಾರ್ಯ ಪ್ರಾರಂಭವಾಗದ ಅಥವಾ ಮೇಲುಪಾಯ ದಾಟಿ ಹೋಗದ ಕಚೇರಿ ಕಟ್ಟಡಗಳು, ನಾಟಕ ಮಂದಿರಗಳು, ಹೋಟೆಲುಗಳು ಹಾಗೂ ಅಂಗಡಿಗಳಿಗಾಗಿ ಸಿಮೆಂಟ್ ಬಳಕೆಯನ್ನು ಈ ಆಜ್ಞೆ ಪರಿಣಾಮಕಾರಿಯಾಗಿ ನಿಷೇಧಿಸುತ್ತದೆ.

ಫಕ್ರುದ್ದೀನ್ ಅಲೀ ಅಹ್ಮದ್‌ ಭಾರತದ ನೂತನ ರಾಷ್ಟ್ರಪತಿ

ನವದೆಹಲಿ, ಆ. 20– ಕಾಂಗ್ರೆಸ್ ಅಭ್ಯರ್ಥಿ ಫಕ್ರುದ್ದೀನ್ ಅಲೀ ಅಹ್ಮದ್ ಅವರು ಭಾರಿ ಬಹುಮತದಿಂದ ಭಾರತದ ರಾಷ್ಟ್ರಪತಿಯಾಗಿ ಇಂದು ಆಯ್ಕೆ ಹೊಂದಿದರು.

ಅಹ್ಮದ್ ಅವರು ಶನಿವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವರು.

ಫಕ್ರುದ್ದೀನ್ ಅವರಿಗೆ ಶೇಕಡ 80.2ರಷ್ಟು ಮತಗಳು, ವಿರೋಧಿ ಅಭ್ಯರ್ಥಿಯಾದ ಕ್ರಾಂತಿಕಾರಿ ಸಮಾಜವಾದಿ ಪಕ್ಷದ ನಾಯಕ ತ್ರಿದೀಪ್ ಕುಮಾರ್ ಚೌಧರಿಯವರಿಗೆ ಶೇಕಡ 19.8ರಷ್ಟು ಮತಗಳು ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT