ಬೆಂಗಳೂರು, ಸೆ. 4 – ಖಾಸಗಿ ಮೆಡಿಕಲ್ ಕಾಲೇಜುಗಳ ಆಡಳಿತವರ್ಗದವರು ಮನಬಂದಂತೆ ವರ್ತಿಸುವುದಕ್ಕೆ ಬಿಡದೆ ಅವರನ್ನು ಶಿಸ್ತಿಗೆ ಒಳಪಡಿಸಲು ಸದ್ಯದಲ್ಲೇ ಶಾಸನ ರಚಿಸಲು ಯೋಚಿಸಿರುವುದಾಗಿ ಆರೋಗ್ಯ ಸಚಿವ ಎಚ್. ಸಿದ್ಧವೀರಪ್ಪನವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿ,
ಅಗತ್ಯಬಿದ್ದರೆ ಸುಗ್ರೀವಾಜ್ಞೆಯನ್ನು ಹೊರಡಿಸಲಾಗುವುದೆಂದು ಹೇಳಿದರು.