ಇಂದುಚಾಚಾನಗರ, ಅಕ್ಟೋಬರ್ 8– ತ್ರಿಭಾಷಾ ಸೂತ್ರವನ್ನು ದೇಶದಾದ್ಯಂತ ಅಂಗೀಕರಿಸಬೇಕೆಂದು ಇಂದು ಇಲ್ಲಿ ಒತ್ತಾಯಪಡಿಸಿದ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಇಂಗ್ಲೀಷ್ ಭಾಷಾ ವಿರೋಧಿಗಳೆಲ್ಲರಿಗೂ ಛೀಮಾರಿ ಹಾಕಿದರು.
‘ಇಂಗ್ಲಿಷ್ ಭಾಷೆಯ ಮಹತ್ವವನ್ನು ಒಪ್ಪಿಕೊಳ್ಳದಿದ್ದರೆ ದೇಶವು ನಾನಾ ಕ್ಷೇತ್ರಗಳಲ್ಲಿ, ಅದರಲ್ಲೂ ಮುಖ್ಯವಾಗಿ ವಿಜ್ಞಾನ ಹಾಗೂ ತಾಂತ್ರಿಕ ಜ್ಞಾನದಲ್ಲಿ ಹಿಂದು ಳಿಯುವುದು’ ಎಂದು ಅವರು ಯುವಕ ಕಾಂಗ್ರೆಸ್ಸಿಗರ ಸಭೆಯಲ್ಲಿ ಮಾತನಾಡುತ್ತ ಎಚ್ಚರಿಕೆ ನೀಡಿದರು.