‘ರಾಜ್ಯದಿಂದ ಐದನೇ ಯೋಜನಾ ಗಾತ್ರದಲ್ಲಿ ಕಡಿತ ಇಲ್ಲ’

ಬೆಂಗಳೂರು, ಜುಲೈ 11– ಐದನೇ ಯೋಜನಾ ಗಾತ್ರವನ್ನು ಕಡಿತಗೊಳಿಸಬೇಕೆಂಬ ಯೋಜನಾ ಆಯೋಗದ ಮನವಿಯನ್ನು ಮೈಸೂರು ಸರ್ಕಾರ ತಿರಸ್ಕರಿಸಿದೆ. ಇದರೊಂದಿಗೆ, 300 ಕೋಟಿ ರೂಪಾಯಿಗಳ ಯೋಜನೇತರ ವೆಚ್ಚ ಒಳಗೊಂಡ 1,650 ಕೋಟಿ ರೂಪಾಯಿಗಳನ್ನು ಮೀಸಲಿಡಲು ನಿರ್ಧರಿಸಿದೆ.

ಶೇಕಡ 8.5ರಷ್ಟು ಬೆಳವಣಿಗೆ ದರದ ನಿರೀಕ್ಷೆ ಹೊಂದಿದ ರಾಜ್ಯದ ಐದನೇ ಯೋಜನಾ ಕರಡಿಗೆ ಒಪ್ಪಿಗೆ ಅಂತಿಮಗೊಂಡಿದ್ದು, ಮುಂದಿನ ವಾರ ಅದನ್ನು ಯೋಜನಾ ಆಯೋಗಕ್ಕೆ ಕಳುಹಿಸುವ ಸಾಧ್ಯತೆಯಿದೆ. ರಾಜ್ಯ ಸರ್ಕಾರವು ಮೈಸೂರು ರಾಜ್ಯದಲ್ಲಿ ತಲಾ ಆದಾಯವನ್ನು ರಾಷ್ಟ್ರೀಯ ಸರಾಸರಿ ಮಟ್ಟಕ್ಕೆ ಕೊಂಡೊಯ್ಯುವ ಭರವಸೆ ಹೊಂದಿದೆ. ಒಂದೊಮ್ಮೆ ಯೋಜನಾ ಗಾತ್ರವನ್ನು ತಗ್ಗಿಸಿದರೆ ಬಡತನದ ವಿರುದ್ಧದ ತನ್ನ ಸಮರವು ಪರಿಣಾಮಕಾರಿಯಾಗಿ ಇರುವುದಿಲ್ಲ ಎಂದು ರಾಜ್ಯವು ಆಯೋಗಕ್ಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.