ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ ಈ ದಿನ: ದಕ್ಷಿಣ ಕನ್ನಡಕ್ಕೆ ಸಾಕಷ್ಟು ಅಕ್ಕಿ ಪೂರೈಕೆ

50 ವರ್ಷಗಳ ಹಿಂದೆ ಈ ದಿನ: ದಕ್ಷಿಣ ಕನ್ನಡಕ್ಕೆ ಸಾಕಷ್ಟು ಅಕ್ಕಿ ಪೂರೈಕೆ
Published 9 ಜನವರಿ 2024, 19:16 IST
Last Updated 9 ಜನವರಿ 2024, 19:16 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡಕ್ಕೆ ಸಾಕಷ್ಟು ಅಕ್ಕಿ ಪೂರೈಕೆಯಾಗಲಿ ಇಲ್ಲವೆ ಧಾನ್ಯ ಸಾಗಾಣಿಕೆ ನಿರ್ಬಂಧ ರದ್ದಾಗಲಿ

ಮಂಗಳೂರು, ಜ. 9– ‘ಸರ್ಕಾರವು ಔಪಚಾರಿಕ ಪಡಿತರವನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಾರಿಗೆ ತರುವ ಉದ್ದೇಶದಿಂದ ಸಾಕಷ್ಟು ಅಕ್ಕಿಯನ್ನು ಜಿಲ್ಲೆಗೆ ಪೂರೈಸಬೇಕು. ಇದು ಸಾಧ್ಯವಾಗದೇ ಹೋದರೆ ಅಂತರ ಜಿಲ್ಲಾ ಧಾನ್ಯ ಸಾಗಾಣಿಕೆ ಮೇಲಿನ ನಿರ್ಬಂಧವನ್ನು ತೆಗೆದುಹಾಕಿ ವ್ಯಾಪಾರಿ ಮೂಲಗಳು ಕಾರ್ಯವೆಸಗಲು ರಾಜ್ಯದಾದ್ಯಂತ ಏಕರೀತಿಯ ಧಾರಣೆಗಳು ಉಳಿಯುವಂತಹ ಅವಕಾಶ ಕೊಡಬೇಕು’ ಎಂದು ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಶಾಸಕರು ಮತ್ತು ತಾಲ್ಲೂಕು ಬೋರ್ಡ್‌ ಅಧ್ಯಕ್ಷರ ವಿಶೇಷ ಸಭೆಯುಒತ್ತಾಯಪಡಿಸಿತು.

ಈ ಬಗ್ಗೆ ಸಭೆಯು ಅಂಗೀಕರಿಸಿದ ನಿರ್ಣಯದಲ್ಲಿ ‘ಸರ್ಕಾರವು ಈಹೊಣೆಗಾರಿಕೆಯನ್ನು ವಹಿಸಿಕೊಳ್ಳದಿದ್ದರೆ ನಾವು ಜನರನ್ನು ಎದುರಿಸಲು ಸಾಧ್ಯವಾಗದು. ಜಿಲ್ಲೆಯಲ್ಲಿ ಉದ್ಭವಿಸುವ ಪರಿಸ್ಥಿತಿಗೂ ನಾವು ಜವಾಬ್ದಾರರಾಗಲಾರೆವು’ ಎಂದು ತಿಳಿಸಲಾಗಿದೆ.

ಒಣ ಜಿಲ್ಲೆಗಳಲ್ಲಿ ಫಲಕ್ಷೇತ್ರ

ಬೆಂಗಳೂರು, ಜ. 9– ಒಣ ಜಿಲ್ಲೆಗಳಾದ ಬಿಜಾಪುರ, ಗುಲ್ಬರ್ಗ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯವಿಸ್ತರಿಸುವುದರ ಜೊತೆಗೆ ಮೋಸಂಬಿ ಫಲವನ್ನು ಪಡೆಯಲು ತೋಟಗಾರಿಕೆ ಇಲಾಖೆ ಕ್ರಮ ಕೈಗೊಳ್ಳಲಿದೆ.

ಕೃಷ್ಣಾ ಮೇಲಣ ಯೋಜನೆ, ಮಲಪ್ರಭಾ, ಘಟಪ್ರಭಾ ಯೋಜನೆಗಳು ನೀರಾವರಿ ಸೌಲಭ್ಯ ನೀಡುವ ಮುನ್ನ ಏತ ನೀರಾವರಿ ಮೂಲಕ ಈ ಹಣ್ಣನ್ನು ಬೆಳೆಯುವ ಬಗ್ಗೆ ಜನರಿಗೆ ಪರಿಚಯ ಮಾಡಿಕೊಡಲಾಗುವುದು ಎಂದು ತೋಟಗಾರಿಕೆ ರಾಜ್ಯ ಸಚಿವ ಕೆ.ಟಿ.ರಾಠೋಡ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT