ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ–1972

Last Updated 11 ಮೇ 2022, 22:15 IST
ಅಕ್ಷರ ಗಾತ್ರ

ಗೇಣಿದಾರನಿಗೆ ರಕ್ಷಣೆ ನೀಡಿ ಸುಗ್ರೀವಾಜ್ಞೆ

ಬೆಂಗಳೂರು, ಮೇ 11– ಎರಡು ವರ್ಷದ ಗೇಣಿ ಬಾಕಿಯನ್ನು ಗೇಣಿದಾರ ಪಾವತಿ ಮಾಡಿದಲ್ಲಿ, ಆತನನ್ನು ಒಕ್ಕಲೆಬ್ಬಿಸುವುದರ ವಿರುದ್ಧ ರಕ್ಷಣೆ ನೀಡಿ ಸರ್ಕಾರ ಇಂದು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು.

ಗೇಣಿದಾರರಿಗೆ ಈ ರಕ್ಷಣೆ ನೀಡಲು ಕಳೆದ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಿದ್ದ ವಿಧೇಯಕವು ಶಾಸನವಾಗಲು ಸಾಧ್ಯವಾಗಲಿಲ್ಲವಾಗಿ ಸರ್ಕಾರ ಈಗ ಜರೂರು ಶಾಸನವನ್ನು ಜಾರಿಗೆ ತಂದಿದೆ.ಈ ತುರ್ತು ಶಾಸನ ಮೇ 11ರಿಂದ ಜಾರಿಗೆ ಬಂದಿದೆ. ಮಂಡಿಸಲಾಗಿದ್ದ ವಿಧೇಯಕದಲ್ಲಿದ್ದ ವಿಧಿಗಳೆಲ್ಲವೂ ಈ ಜರೂರು ಶಾಸನದಲ್ಲಿವೆ.

ಈ ವಿಧಿಗಳ ರೀತ್ಯ, ಗೇಣಿ ಬಾಕಿ ಕೊಡಲಿಲ್ಲವೆಂಬ ಕಾರಣದ ಮೇಲೆ ಭೂ ಮಾಲೀಕನ ಸ್ವಾಧೀನಕ್ಕೆ ಜಮೀನು ಹೋಗ
ಬೇಕೆಂಬ ನ್ಯಾಯಾಲಯದ ಆಜ್ಞೆಯನ್ನೇ ಆಗಲಿ, ಗೇಣಿದಾರ 2 ವರ್ಷಗಳ ಗೇಣಿ ಬಾಕಿ ಪಾವತಿಸಿದಲ್ಲಿ ಜಾರಿಗೆ ತರುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT