ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ತ್ಯಾಗದ ಮಾತು ಆಡುವವರು ಮೊದಲು ಪಾಲಿಸಲಿ: ಅರಸು

Published 23 ನವೆಂಬರ್ 2023, 22:54 IST
Last Updated 23 ನವೆಂಬರ್ 2023, 22:54 IST
ಅಕ್ಷರ ಗಾತ್ರ

ತ್ಯಾಗದ ಮಾತು ಆಡುವವರು ಮೊದಲು ಪಾಲಿಸಲಿ: ಅರಸು

ಧರ್ಮಸ್ಥಳ, ನ. 23– ಸರ್ವಧರ್ಮ ಸಮ್ಮೇಳನದ 41ನೇ ಅಧಿವೇಶನ ಇಂದು ಇಲ್ಲಿ ಪ್ರಾರಂಭವಾಯಿತು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ದೇವರಾಜ ಅರಸು, ‘ಸಮಷ್ಟಿ ಸಾಧಕವಾದ ಧರ್ಮವನ್ನು ಆಚರಣೆಗೆ ತರಲು ಮಠಾಧಿಪತಿಗಳು ಶ್ರಮಿಸಬೇಕು. ಆಸ್ತಿ ಇದ್ದರೆ ಮಾತ್ರ ತಮ್ಮ ಮಠ ಅಥವಾ ಸಂಸ್ಥೆಯ ಕೆಲಸ ಸಾಧ್ಯ ಎಂದು ಕುಳಿತರೆ ನಾವು ಅವರ ಕರ್ತವ್ಯಗಳು ಏನು ಎಂದು ಕೇಳಬೇಕಾಗುತ್ತದೆ. ತ್ಯಾಗದ ಪಾಠ ಹೇಳುವವರು ಸ್ವಲ್ಪಮಟ್ಟಿಗಾದರೂ ಪರಿಪಾಲಿಸಬೇಕು. ಮನಸ್ಸು, ಮಾತು, ಕೃತಿ ಒಂದಾದರೆ ಮಾತ್ರ ಆತ್ಮಶಕ್ತಿ ಕೂಡುತ್ತದೆ’ ಎಂದು ಹೇಳಿದರು.

ಪೆಟ್ರೋಲ್ ಬಂಕ್‌ ಪರವಾನಗಿ ನೀಡಿಕೆಯಲ್ಲಿ ಕಾಲುಭಾಗ ಹರಿಜನರಿಗೆ: ಪ್ರಧಾನಿ ಆದೇಶ

ನವದೆಹಲಿ, ನ. 23– ಪೆಟ್ರೋಲ್‌ ಬಂಕುಗಳನ್ನು ಇಡುವುದಕ್ಕೆ ಹೊಸದಾಗಿ ಪರವಾನಗಿ ನೀಡುವಾಗ ಶೇಕಡ 25ರಷ್ಟನ್ನು ಹರಿಜನ, ಗಿರಿಜನರಿಗೆ ಮೀಸಲಿಡಬೇಕೆಂದು ಪ್ರಧಾನಿ ಅವರು ಆದೇಶ ನೀಡಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಅನುಕೂಲಸ್ಥ ವರ್ಗಕ್ಕಿಂತ ದುರ್ಬಲ ವರ್ಗಕ್ಕೆ ಆದ್ಯತೆ ಕೊಡಬೇಕೆಂಬುದು ಸರ್ಕಾರದ ನೀತಿಯಾಗಿದೆಯೆಂದು ಪೆಟ್ರೋಲಿಯಂ ಖಾತೆ ಸಚಿವ ಡಿ.ಕೆ.ಬರೂವ ಅವರು ಇಂದು ಲೋಕಸಭೆಯಲ್ಲಿ
ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT