ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ 2.5.1972 (ಮಂಗಳವಾರ)

Last Updated 1 ಮೇ 2022, 19:30 IST
ಅಕ್ಷರ ಗಾತ್ರ

‘ವಂಶವೃಕ್ಷ’ದ ಗಿರೀಶ್‌, ಕಾರಂತ್‌ ಶ್ರೇಷ್ಠ ನಿರ್ದೇಶಕರು

ನವದೆಹಲಿ, ಮೇ.1– ‘ವಂಶವೃಕ್ಷ’ ಕನ್ನಡ ಚಿತ್ರದ ನಿರ್ದೇಶಕರಾದ ಗಿರೀಶ ಕಾರ್ನಾಡ ಮತ್ತು ಬಿ.ವಿ.ಕಾರಂತ್‌ ಅವರು ಅತ್ಯುತ್ತಮ ನಿರ್ದೇಶಕರೆಂದು ಪರಿಗಣಿತರಾಗಿದ್ದಾರೆ.

‘ವಂಶವೃಕ್ಷ’ಕ್ಕೆ ಪ್ರಾದೇಶಿಕ ಪ್ರಶಸ್ತಿ ದೊರತಿದೆ.ಚಲನಚಿತ್ರಗಳ ಹತ್ತೊಂಬತ್ತನೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಇಂದು ಪ್ರಕಟಿ
ಸಲಾಯಿತು.

ಅಂತರ ರಾಷ್ಟ್ರೀಯ ಖ್ಯಾತಿ ಪಡೆದ ಸತ್ಯಜಿತ್‌ರಾಯ್‌ ಅವರ ಬಂಗಾಳಿ ಕಥಾಚಿತ್ರ ‘ಸೀಮಬದ್ಧ’ಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಕೊಡಲಾಗಿದೆ.

ಹಿಂದಿ ಕಥಾಚಿತ್ರ ‘ಅನುಭವ್‌’ ಎರಡನೆ ಅತ್ಯುತ್ತಮ ಚಿತ್ರವೆಂದು ಪರಿಗಣಿತವಾಗಿದೆ. ಕೆ.ಎ. ಅಬ್ಬಾಸ್‌ ಅವರ ‘ಧೋಬೂಂದ್‌ ಪಾನಿ’ ರಾಷ್ಟ್ರೈಕ್ಯದ ಕಥಾವಸ್ತುವಿಗಾಗಿ ಪ್ರಶಸ್ತಿ ಗಳಿಸಿದೆ.

ಸಚಿವರ ಕಿಸೆಗೇ ಕಳ್ಳ ಕತ್ತರಿ

ಬೆಂಗಳೂರು, ಮೇ.1– ರಾಜ್ಯದ //ಶಾಖೆಯ ರಾಜ್ಯ ಸಚಿವ ಶ್ರೀ.//ಡಿ.ಕಿತ್ತೂರ್‌ ಅವರ ಜೇಬು ಕಳ್ಳತನ ಮಾಡಿ, 500 ರೂಪಾಯಿ ಅಪಹರಿಸಿದ ಪ್ರಕರಣ ವರದಿ ಆಗಿದೆ.

ಕಳೆದ ಶನಿವಾರ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ಲಾಲ್‌// ಗಾಜಿನ ಮನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಈ ಪ್ರಕರಣ ನಡೆಯಿತೆಂದು ಹೇಳಲಾಗಿದೆ.

ವೇದಿಕೆಯಿಂದ ಸುಮಾರು 20 ಅಡಿ ಅಂತರದಲ್ಲಿ// 5 ಮತ್ತು 10 ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳ ಬಿದ್ದಿರುವುದು ಕಂಡುಬಂತು. ಸಚಿವ ಶ್ರೀ ಕಿತ್ತೂರ್‌ ಅವರು ಅವುಗಳನ್ನು ತೆಗೆದುಕೊಂಡು ತಮ್ಮ ಜೇಬಿಗೆ ಕೈ ಹಾಕಿದಾಗ //100 ರೂಪಾಯಿ ಮೌಲ್ಯದ ಐದು ಕರೆನ್ಸಿ ನೋಟುಗಳಿದ್ದ ಕವರ್‌ ಮಯಾವಾಗಿತ್ತು. ಶ್ರೀ ಕಿತ್ತೂರ್‌ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT