ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬುಧವಾರ, 9–12–1970

Last Updated 8 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮೀನುಗಾರಿಕೆ ಬಂದರು ಆಗಿ ಮಲ್ಪೆ ಯೋಜನೆಗೆ ಕೇಂದ್ರದ ಅಸ್ತು ಖಚಿತ

ಬೆಂಗಳೂರು, ಡಿ. 8– ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆ ಬಂದರನ್ನು ಎರಡು ಕೋಟಿ ಎಪ್ಪತ್ತೈದು ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಮೀನುಗಾರಿಕೆ ಬಂದರಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಯೋಜನೆಯೊಂದನ್ನು ಕೇಂದ್ರಕ್ಕೆ ಕಳುಹಿಸಿದ್ದು, ಕೇಂದ್ರವು ಇದಕ್ಕೆ ಮಂಜೂರಾತಿ ನೀಡುವುದು ಖಚಿತವಾಗಿದೆ ಎಂದು ರಾಜ್ಯದ ಬಂದರು ಮತ್ತು ಮೀನುಗಾರಿಕೆ ಸ್ಟೇಟ್‌ ಸಚಿವ ಶ್ರೀ ಎಚ್‌.ಸಿ. ಲಿಂಗಾರೆಡ್ಡಿಯವರು ಇಂದು ಇಲ್ಲಿ ತಿಳಿಸಿದರು.

ವಿದೇಶಿ ಬಂಡವಾಳ: ಕೇಂದ್ರದ ನಿಲುವು ನಕಾರಾತ್ಮಕವಲ್ಲ

ನವದೆಹಲಿ, ಡಿ. 8– ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಬಗ್ಗೆ ಸರ್ಕಾರವು ನಕಾರಾತ್ಮಕ ದೃಷ್ಟಿಯನ್ನು ಅನುಸರಿಸುತ್ತಿದೆ ಎಂಬುದನ್ನು ಕೈಗಾರಿಕಾಭಿವೃದ್ಧಿ ಸಚಿವ ದಿನೇಶ್‌ ಸಿಂಗರು ಇಂದು ನಿರಾಕರಿಸಿದರು.

‘ಒಟ್ಟಾರೆ ರಾಷ್ಟ್ರದ ಹಿತದೃಷ್ಟಿಯಿಂದ’ ವಿದೇಶಿ ಖಾಸಗಿ ಬಂಡವಾಳ ಹೂಡಿಕೆ ಬಗ್ಗೆ ನೀತಿಯನ್ನು ರೂಪಿಸಲಾಗಿದ್ದು ‘ನಿಯಂತ್ರಿತ’ ದೃಷ್ಟಿಯನ್ನನುಸರಿಸುತ್ತಿರುವುದು ‘ನಮಗೆ ಒಳ್ಳೆಯದನ್ನು ಮಾಡಿದೆ’ ಎಂದು ಅವರು ವೀರೇಂದ್ರ ಕುಮಾರ್‌ ಷಾ ಅವರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT